


ಸಿದ್ಧಾಪುರ,ಮೇ,೨೩- ಏಂಜಿಸಿ ಮತ್ತು ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯಗಳ ಶೌಚಾಲಯಗಳ ಇಂಗು ಗುಂಡಿಗಳ ನಿರ್ವಹಣೆ ಇಲ್ಲದೆ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗಿದೆ ಎಂದು ಅವರಗುಪ್ಪಾದ ನಿವಾಸಿಗಳು ಆರೋಪಿಸಿದ್ದು ಈ ತೊಂದರೆ ನಿವಾರಣೆಗೆ ಕೋರಿ ಕೋಲಶಿರ್ಸಿ ಗ್ರಾ.ಪಂ. ಗೆ ಲಿಖಿತ ದೂರು ನೀಡಿದ್ದಾರೆ.
ಕೋಲಶಿರ್ಸಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಂ.ಜಿ.ಸಿ. ಕಾಲೇಜು ಮತ್ತು ಧನ್ವಂತರಿ ಆಯುರ್ವೇದ ಕಾಲೇಜುಗಳ ಬಾಲಕರ ವಸತಿ ನಿಲಯಗಳಿಗೆ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ಶೌಚಾಲಯದ ಇಂಗು ಗುಂಡಿಗಳ ಸಾಮರ್ಥ್ಯಕ್ಕಿಂತ ಹೆಚ್ಚು ತ್ಯಾಜ್ಯ ತುಂಬಿ ಬಯಲಿನಲ್ಲಿ ಹರಿಯುವುದರಿಂದ ಈ ಭಾಗದ ಜನರಿಗೆ ದುರ್ವಾಸನೆ, ಸೊಳ್ಳೆಕಾಟ ತಡೆಯಲಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಯ ಪ್ರಮುಖರಿಗೆ ತಿಳಿಸಿದರೆ ಅವರು ಉಪೇಕ್ಷಿಸುತ್ತಾರೆ.
ಈ ಬಗ್ಗೆ ಗ್ರಾ.ಪಂ. ಆಡಳಿತಕ್ಕೆ ಲಿಖಿತ ದೂರು ನೀಡಿದ್ದೇವೆ. ಸಂಬಂಧಿಸಿದವರು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಈ ಅವ್ಯವಸ್ಥೆಯಿಂದ ಸ್ಥಳಿಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ವಿನಂತಿಸಿದ್ದಾರೆ.
