

ಪಹಣಿ ಪತ್ರಿಕೆಯ ಪ್ರತಿ ಪ್ರತಿಗೆ ಸರ್ಕಾರ ವಿಧಿಸುತಿದ್ದ ಹತ್ತು ರೂಪಾಯಿ ಶುಲ್ಕವನ್ನು ೨೫ ರೂಪಾಯಿಗೆ ಹಿಂದಿನ ಸರ್ಕಾರ ಏರಿಸಿದೆ. ಈ ಶುಲ್ಕವನ್ನು ೫ ರೂಪಾಯಿಗೆ ಇಳಿಸಬೇಕು ಎಂದುಉತ್ತರ ಕನ್ನಡ ರೈತ ಸಂಘದಜಿಲ್ಲಾ ಅಧ್ಯಕ್ಷ ಕೆರಿಯಪ್ಪ ನಾಯ್ಕ ಬೇಡ್ಕಣಿ ಆಗ್ರಹಿಸಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಹವಾಮಾನ ಆಧರಿತ ಬೆಳೆ ವಿಮೆ ಪ್ರಕ್ರೀಯೆ ಈಗ ಪ್ರಾರಂಭವಾಗುತ್ತಿದೆ. ಬೆಳೆವಿಮೆ ಬೆಳೆಹಾನಿಗೆ ಪರಿಹಾರವಾಗಬೇಕೇ ಹೊರತು ಹವಾಮಾನ ಆಧರಿಸಿ ಇರುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

