
ಸರ್ಕಾರದ ನಿಯಮಗಳು, ಕಾನೂನು ಪಾಲನೆ ಜೊತೆಗೆ ಮಾನವೀಯ ಸ್ಪಂದನದ ಆಡಳಿತಕ್ಕೆ ಒತ್ತು ನೀಡಲು ನೂತನ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದ್ದಾರೆ.
ಸಿದ್ಧಾಪುರ ತಹಸಿಲ್ಧಾರ ಕಛೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಶೀಲನೆಯ ಆರಂಭಿಕ ಸಭೆ ನಡೆಸಿದ ಭೀಮಣ್ಣ ನಾಯ್ಕ ತಾನು ಹೊಸ ಶಾಸಕನಾದರೂ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಸೇವೆ ಸಲ್ಲಿಸಿದ ಅನುಭವ ವಿದೆ. ಅಧಿಕಾರಿಗಳು, ಆಡಳಿತ ವರ್ಗ ಜನಸಾಮಾನ್ಯರನ್ನು ಸತಾಯಿಸದೆ ಮಾನವೀಯ ಸ್ಪಂದನದ ಸೇವೆ ನೀಡಿದರೆ ಸರ್ಕಾರದ ಯೋಜನೆಗಳ ಸದುಪಯೋಗ ಸಾಧ್ಯ. ತನಗೆ ಶಾಸನಾಗಿದ್ದಕ್ಕೆ ಇರುವ ಹೆಚ್ಚುಗಾರಿಕೆಗಿಂತ ಜನಪರ ಕೆಲಸದ ನಿರೀಕ್ಷೆ ಹೆಚ್ಚಿದೆ. ಜನಪರವಾದ ಆಡಳಿತಕ್ಕೆ ತಾಲೂಕಾ ಆಡಳಿತ ಸಹಕಾರ ನೀಡಬೇಕು ಎಂದು ಕೋರಿದರು.
https://samajamukhi.net/2023/05/16/bheemanna-first-meeting/

