


ಆಕೆ ಕೆಲವೇ ದಿನ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಮನೆಗೆ ಮರಳಿದ್ದಳು!
ಅವಳ ತಂದೆ-ತಾಯಿ ಕೂಲಿ ಮಾಡಿ ಬದುಕುವವರು. ಈ ಎಳೆಹುಡುಗಿಗೆ ವಿದ್ಯಾಭ್ಯಾಸ ಕೊಡಿಸಿ ಜೊತೆಗೆ ಒಂದು ಮೊಬೈಲ್ ಫೋನ್ ಕೊಡಿಸಿದ್ದರು.
ಮೊಬೈಲ್ ನಲ್ಲಿ ಹರಟುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ರೋಹಿಣಿ ಕೆಲವು ಸ್ನೇಹಿತರಿಂದ ಹಣ ಪಡೆದಿದ್ದಳು, ಹಣದ ವ್ಯವ ಹಾರಕ್ಕಾಗಿಯೇ ಮೊಬೈಲ್ ಬಳಸಿ ಸ್ನೇಹ ಸಂಪಾದಿಸುತಿದ್ದ ಯುವತಿಯ ಕೆಲವರೊಂದಿಗಿನ ವ್ಯವಹಾರ ಮನೆಯವರೆಗೂ ಬರುವುದರಲ್ಲಿತ್ತು. ಈ ವ್ಯವಹಾರದ ವ್ಯಕ್ತಿಯೊಬ್ಬ ಹಣಕ್ಕಾಗಿ ನಿಮ್ಮ ಮನೆಗೆ ಬರುತ್ತೇನೆ ಎಂದು ರವಾನಿಸಿದ್ದ ಸಂದೇಶವೇ ರೋಹಿಣೆ ಹಸ್ಲರ್ ಆತ್ಮಹತ್ಯೆಗೆ ಕಾರಣವಾಯಿತೆ?
ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಗುಬ್ಬಗೋಡಿನ ರೋಹಿಣಿ ಹಸ್ಲರ್ ದುರಂತ ಕತೆಯಿದು.

ಯಾವುದೋ ಕಾರಣ ತಲೆಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ದಾರಿತಪ್ಪಿಸಿತೊ?, ಮಹಾನಗರ ದಾರಿತಪ್ಪಿಸಿತೊ? ಹರೆಯದ ಮಗಳ ಸಾವಿನ ಕಾರಣ ಏನೇ ಇರಬಹುದು ಬಡ ತಂದೆ-ತಾಯಿಗಳ ನೋವಿಗೆ ನೆರವಾಗಲು ಮಹಾನಗರವೂ ಇಲ್ಲ, ಮೊಬೈಲೂ ಇಲ್ಲ.
