

ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಅನುದಾನಿತ ಶಾಲಾ ನೌಕರರ ಪರಿಸ್ಥಿತಿಗಳ ಅರಿವಿದ್ದು ಅವರೇ ಸ್ವಯಂ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಿರುವುದರಿಂದ ಅನುದಾನಿತ ನೌಕರರ ಹಿತಾಸಕ್ತಿ ಕಾಪಾಡುತ್ತಾರೆ ಎಂದು ಶಾಸಕ ಭೀಮಣ್ಣ ನಾಯ್ಕ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಸಿದ್ಧಾಪುರದಲ್ಲಿ ಅನುದಾನಿತ ನೌಕರರ ಸಂಘದಿಂದ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು ಅನುದಾನಿತ ಶಿಕ್ಷಣ ಸಂಸ್ಥೆಗಳ ವಿಚಾರದಲ್ಲಿ ಬಹಳಷ್ಟು ಕೆಲಸಗಳಾಗಬೇಕಿದೆ. ಆ ಬಗ್ಗೆ ಸಂಪೂರ್ಣ ಜ್ಞಾನ, ಅನುಭವವಿರುವ ಮಧು ಬಂಗಾರಪ್ಪ ಈಗ ಶಿಕ್ಷಣ ಸಚಿವರಾಗಿರುವುದು ಪೂರಕವಾಗಲಿದೆ ಎಂದರು.
