

ಸಿದ್ಧಾಪುರ,ಮೇ೩೧- ಅಪ್ರಾಪ್ತ ಬಾಲಕಿಯೊಬ್ಬಳನ್ನು ಲೈಂಗಿಕವಾಗಿ ಹಿಂಸಿಸಿ ಅಪಹರಿಸಿರುವ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದೆ. ಜೋಗ ಸಮೀಪದ ಗ್ರಾಮದ ಬಾಲಕಿಯೊಬ್ಬಳು ತಾಲೂಕು ಕೇಂದ್ರದ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯಾಗಿದ್ದಳು, ಆಕೆ ಗ್ರಾಮಕ್ಕೆ ಹೋದಾಗ ಸ್ಥಳಿಯ ಬಿಲ್ ಸಂಗ್ರಹಕಾರ ಒಬ್ಬನ ಸಲುಗೆ ಬೆಳೆಸಿ ಪರಾರಿಯಾಗಿರುವ ಬಗ್ಗೆ ಅಪ್ರಾಪ್ತೆಯ ತಂದೆ ಪೊಲೀಸ್ ದೂರು ನೀಡಿದ್ದಾರೆ.
ರಾಘವೇಂದ್ರ ಈಶ್ವರ ನಾಯ್ಕ ಆರೋಪಿಯಾಗಿದ್ದು ವಿದ್ಯುತ್ ಮೀಟರ್ ರೀಡರ್ ಆಗಿರುವ ಈತ ತನ್ನ ಮಗಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ ಮೇ ೨೧ ರಂದು ಅಪಹರಿಸಿದ್ದಾನೆ ಎಂದು ಅಪ್ರಾಪ್ತೆಯ ತಂದೆ ಮಲ್ಲನ್ ಮೇ ೩೦ ರಂದು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಅಪಹರಣ ಮತ್ತು ಪೊಸ್ಕೋ ಕಾಯಿದೆಗಳಡಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
