

ಸಿದ್ದಾಪುರ
ತಾಲೂಕಿನ ಹಸರಗೋಡ ಗ್ರಾಪಂ ವ್ಯಾಪ್ತಿಯ ಶಮೇಮನೆಯಲ್ಲಿ ಸಿರಸಿಯ ನೆಲಸಿರಿ ರೈತ ಉತ್ಪಾದಕ ಕಂಪನಿಯ ಮೂಲಕ ನನ್ನ ಜಿಲ್ಲೆ ನನ್ನ ಉತ್ಪನ್ನ ಯೋಜನೆಯಲ್ಲಿ ಹಲಸು ಮತ್ತು ಬಾಳೆಯ ಸಂಸ್ಕರಣಾ ಘಟಕವನ್ನು ನಬಾರ್ಡನ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಟಿ.ರಮೇಶ ಉದ್ಘಾಟಿಸಿ ಉತ್ಪನ್ನಗಳನ್ನು ವೀಕ್ಷಿಸಿದರು.
ಉದ್ಘಾಟಿಸಿ ಮಾತನಾಡಿದ ಟಿ.ರಮೇಶ ಅವರು ಕೌಶಲಗಳ ಮೂಲಕ ಉತ್ಪನ್ನ ಸಂಸ್ಕರಿಸಿದರೆ ಸಾಲದು ಅದಕ್ಕೆ ಸರಿಯಾದ ತರಬೇತಿ, ಮಾರ್ಗದರ್ಶನ ದೊರೆತಾಗ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.
ಮಹಿಳೆಯರು ತಮ್ಮಲ್ಲಿರುವ ಕೌಶಲವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವುದಕ್ಕೆ ಇಂತಹ ಸಂಸ್ಕರಣ ಘಟಕ ಹೆಚ್ಚು ಉಪಯುಕ್ತವಾಗುತ್ತದೆ.ನಬಾರ್ಡ ಈ ರೀತಿಯ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಯಾವತ್ತೂ ನೀಡುವುದರೊಂದಿಗೆ ತರಬೇತಿಯನ್ನು ನೀಡುತ್ತದೆ ಎಂದು ಹೇಳಿದರು.
ನಬಾರ್ಡನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರೇಜಿಸ್ ಇಮ್ಯಾನ್ಯುಯಲ್, ಕದಂಬ ಮಾರ್ಕೆಟಿಂಗ್‌ನ ಉಪಾಧ್ಯಕ್ಷ ಎಂ.ವಿ.ಭಟ್ಟ ತಟ್ಟಿಕೈ, ನೆಲಸಿರಿ ಕಂಪನಿಯ ನಿರ್ದೇಶಕ ನಾರಾಯಣ ಹೆಗಡೆ ಗಡಿಕೈ, ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ಇತರರಿದ್ದರು.
ಜಿ.ವಿ.ಹೆಗಡೆ ಹುಳಗೋಳ ಹಲಸಿನಬೆಳೆ ಕುರಿತು ಮಾಹಿತಿ ನೀಡಿದರು.
ಮಮತಾ ವಿನಾಯಕ ಭಟ್ಟ ಶಮೆಮನೆ ಇವರು ಶಮೆಮನೆಯಲ್ಲಿ ಮಹಿಳೆಯರು ಸಂಘಟನೆಯ ಮೂಲಕ ಯಾವ ರೀತಿ ನೆಲಸಿರಿ ಉತ್ಪಾದಕ ಕಂಪನಿಯ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಶಿರಸಿಯ ನೆಲಸಿರಿ ರೈತ ಉತ್ಪಾದಕ ಕಂಪನಿಯ ವ್ಯವಸ್ಥಾಪಕ ಮಂಜುನಾಥ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಶಿರಸಿ-ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾದ ಭೀಮಣ್ಣ ನಾಯ್ಕ ಅವರು ಇಂದು ಸಿದ್ದಾಪುರಕ್ಕೆ ಆಗಮಿಸಿದಾಗ ಅವರನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಉಪಾಧ್ಯಕ್ಷ ಯಶವಂತ ತ್ಯಾರ್ಸಿ, ಪದಾಧಿಕಾರಿಗಳಾದ ನಾಗರಾಜ ಭಟ್ಟ ಕೆಕ್ಕಾರ, ಗಣೇಶ ಭಟ್ಟ, ಶಿವಶಂಕರ ಕೋಲಶಿರ್ಸಿ, ಪತ್ರಕರ್ತರಾದ ನಾಗರಾಜ ನಾಯ್ಕ ಮಾಳ್ಕೋಡು, ದಿವಾಕರ ನಾಯ್ಕ, ಕನ್ನೇಶ ಕೋಲಶಿರ್ಸಿ ಇದ್ದರು.

