
ಸಿದ್ಧಾಪುರದಲ್ಲಿ ನೂತನ ಶಾಸಕ ಭೀಮಣ್ಣ ನಾಯ್ಕರ ಕಛೇರಿಯನ್ನು ತಾಲೂಕಾ ಪಂಚಾಯತ್ ಆವರಣದ ಸಾಮರ್ಥ್ಯ ಸೌಧ ದಲ್ಲಿ ಉದ್ಘಾಟಿಸಲಾಯಿತು.
ಶಾಸಕರ ಕಛೇರಿ ಉದ್ಘಾಟಿಸಿದ ಭೀಮಣ್ಣ ನಾಯ್ಕ ಕ್ಷೇತ್ರದ ಆದ್ಯತೆಗಳಿಗೆ ತಕ್ಕಂತೆ ಕೆಲಸಮಾಡುತಿದ್ದು ಅನಿವಾರ್ಯ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತಿದ್ದೇವೆ ಎಂದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸರ್ಕಾರ ಕಾರ್ಯಾರಂಭ ಮಾಡಿದೆ. ಜಿಲ್ಲೆಯಿಂದ ಸಚಿವರಾಗಿರುವ ಮಂಕಾಳು ವೈದ್ಯರ ಸಹಕಾರದಿಂದ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
