https://m.youtube.com/watch?v=tuz2dPrQVD4 ದಾಂಡೇಲಿ: ಭಾರತೀಯ ಅಂಚೆ ಇಲಾಖೆ ಸಿರಸಿ ವಿಭಾಗ ದಾಂಡೇಲಿ ತಾಲೂಕಿನ ಕೇಸರೂಳ್ಳಿ ಅಂಚೆ ವ್ಯಾಪ್ತಿಯ ಡೊಮಗೇರಾ ಗ್ರಾಮದಲ್ಲಿ ‘ಸಂಪೂರ್ಣ ಮಹಿಳಾ ಸನ್ಮಾನ’ ಗ್ರಾಮ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ ಈ ಯೋಜನೆಯ ಮೂಲಕ ಅಂಚೆ ಇಲಾಖೆಯಲ್ಲಿ ಮಹಿಳೆಯರು ಖಾತೆ ತೆಗೆದು 1000ರೂಪಾಯಿ ದಿಂದ 2 ಲಕ್ಷದ ವರೆಗೆ ನಿಗದಿತ ಉಳಿತಾಯ ಮಾಡಿ, ಬಡ್ಡಿ ಪಡೆಯುವ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ಸಿರಸಿ ವಿಭಾಗದ ಅಂಚೆ ಅಧೀಕ್ಷಕರಾದ ಹೂವಪ್ಪ.ಜಿ.ಮಾತನಾಡಿ ಈ ಯೋಜನೆ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಒಳಪಟ್ಟು ಮೊದಲ ಗ್ರಾಮ ಈ ಡೊಮ್ಮಗೇರಾ. ಈ ಕಾರ್ಯಕ್ರಮದ ಭಾಗವಾಗಿ ಈ ಗ್ರಾಮದಲ್ಲಿ 100 ಜನರಿಗೆ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲಾಗಿದೆ. ಯೋಜನೆ ಸಂಪೂರ್ಣ ಲಾಭ ಗ್ರಾಮದ ಮಹಿಳೆಯರು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಶಿರಶಿ ವಿಭಾಗದ ಮಂಜುನಾಥ ಖಾರ್ವಿ, ದಾಂಡೇಲಿಯ ಅಂಚೆ ನಿರೀಕ್ಷರಾದ ಶಿವಾನಂದದೊಡ್ಡಮನಿ,ಡೊಮ್ಮಗೇರಾ ಅಂಚೆ ಮಾಸ್ಟರ ನೀತಾ ಪಾಟೀಲ, ಅವಿನಾಶ ಸಿ.ಎಸ್. ಪ್ರಕಾಶ್ ಮಹರೇಕರ್ ಇದ್ದರು