ಅರಣ್ಯ, ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳು ದುರ್ಬರವಾಗಲಿವೆ ಎಂದು ಎಚ್ಚರಿಸಿರುವ ಸಿದ್ಧಾಪುರ ಸಿವಿಲ್ ನ್ಯಾಯಾಧೀಶ ತಿಮ್ಮಯ್ಯ ಜಿ. ಗಿಡ ನೆಡುವ ಮೂಲಕ, ನೀರು ಸಂರಕ್ಷಿಸುವ ಮೂಲಕ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರದ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ.
ತಾಲೂಕಾ ಆಡಳಿತ ಮತ್ತು ವಕೀಲರ ಸಂಘಗಳ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನದ ಅಂಗವಾಗಿ ವೃಕ್ಷಾರೋಪಣ ಮತ್ತು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಲೆನಾಡಿನಲ್ಲಿ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ ಇದು ಮುಂದಿನ ದುರಂತದ ಮುನ್ಸೂಚನೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಸಿಲ್ಧಾರ ಮಂಜುನಾಥ ಮುನ್ನೋಳ್ಳಿ ಪರಿಸರ ಸಂರಕ್ಷಣೆ ಮತ್ತು ಮರುಬಳಕೆಯ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
https://www.facebook.com/reel/719066616687067