
ಉಪನ್ಯಾಸಕರಿಬ್ಬರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಗುರುವಾರ ತರಗತಿನಡೆಯದ ಬಿಳಗಿ ಕಾಲೇಜಿನಲ್ಲಿ ಇಂದು ಎಂದಿನಂತೆ ತರಗತಿಗಳು ನಡೆದವು.
ಉಪನ್ಯಾಸಕರಿಗೆ ಆಡಳಿತ ಮಂಡಳಿ ಕಿರುಕುಳದ ಹಿನ್ನೆಲೆಯಲ್ಲಿ ಬಿಳಗಿ ಕಾಲೇಜಿನ ಆಡಳಿತವನ್ನು ಸರ್ಕಾರಕ್ಕೆ ವಹಿಸಬೇಕು ಎಂದು ನಿನ್ನೆ ಉಪನ್ಯಾಸಕರ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.
ಉಪನ್ಯಾಸಕರ ಪ್ರತಿಭಟನೆ, ಸ್ಥಳಿಯರ ಬೆಂಬಲದ ಹಿನ್ನೆಲೆಯಲ್ಲಿ ಗುರುವಾರ ಜ್ಞಾನಸಾಗರ ಕಾಲೇಜಿಗೆ ಆಗಮಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸ್ಥಳಿಯ ಮುಖಂಡರ ಮಾತುಕತೆ, ಸಂಧಾನದ ನಂತರ ಉಪನ್ಯಾಸಕರಿಗೆ ನ್ಯಾಯ ಒದಗಿಸುವ ಹೊಣೆಗಾರಿಕೆಯನ್ನು ಸ್ಥಳಿಯ ಶಾಸಕರಿಗೆ ವಹಿಸಲಾಯಿತು.
ನಿನ್ನೆಯ ಪ್ರತಿಭಟನೆಯ ನಂತರ ನಡೆದ ಸಭೆ ಅಲ್ಲಿನ ತೀರ್ಮಾನ,ಸಂಧಾನಗಳ ಹಿನ್ನೆಲೆಯಲ್ಲಿ ಉಪನ್ಯಾಸಕರೊಂದಿಗೆ ಸ್ಥಳೀಯರು ನಿನ್ನೆ ಕಾಲೇಜಿಗೆ ಹಾಕಿದ್ದ ಬೀಗವನ್ನು ಇಂದು ತೆಗೆದು ತರಗತಿಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟರು.
