

ಸಿದ್ಧಾಪುರ ಕೊಂಡ್ಲಿ,ಹಾಳದಕಟ್ಟಾ ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿಯ ನಂತರ ನಡೆದ ಗಲಾಟೆಯಲ್ಲಿ ಮೂರು ಜನರಿಗೆ ಗಾಯಗಳಾಗಿದ್ದು ತೀವೃವಾಗಿ ಗಾಯಗೊಂಡ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಸಾಗಿಸಲಾಗಿದೆ. ಗಾಯಗೊಂಡವರಲ್ಲಿ ಕೇಶವ ಗೋವಿಂದ ನಾಯ್ಕ, ವಿನಯ ಮತ್ತು ಸಂತೋಷ ನಾಗರಾಜ್ ನಾಯ್ಕ ಹಣಜಿಬೈಲ್ ಸೇರಿದ್ದಾರೆ.
ಶುಕ್ರವಾರದ ಮಧ್ಯರಾತ್ರಿಯ ವೇಳೆ ವಿವಾದಿತ ಭೂಮಿಯಲ್ಲಿ ಮಧ್ಯರಾತ್ರಿಯ ವರೆಗೆ ಮಣ್ಣು ತುಂಬಿಸುತಿದ್ದ ನಾಗರಾಜ್ ನಾಯ್ಕ ಕುಟುಂಬದ ಸದಸ್ಯರ ಮೇಲೆ ಏಕಾಏಕಿ ದಾಳಿಮಾಡಿದ ೮ ಜನರ ತಂಡ ಮೂರು ಜನರಿಗೆ ಗಾಯಗೊಳಿಸಿತು.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ನಾಗರಾಜ್ ನಾಯ್ಕ ಹಣಜಿಬೈಲ್ ತಮ್ಮ ತಮ್ಮ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡುವ ಉದ್ದೇಶದಿಂದ ಬಂದ ೮ ಜನರ ತಂಡ ತಮ್ಮ ತಮ್ಮ ಮತ್ತು ಮಕ್ಕಳಿಬ್ಬರಿಗೆ ಮಾರಣಾಂತಿಕವಾಗಿ ಮಾರಕಾಸ್ತ್ರಗಳಿಂದ ಹೊಡೆದು ಗಾಯಗೊಳಿಸಿದ ಬಗ್ಗೆ ಪರಶುರಾಮ ಬಂಗಾರ್ಯ ನಾಯ್ಕ, ಗಣಪತಿ ಬಂಗಾರ್ಯ ನಾಯ್ಕ ನಾರಾಯಣ ಪರಶುರಾಮ ನಾಯ್ಕ ವೆಂಕಟ್ರಮಣ ಮುಕುಂದ ನಾಯ್ಕ,ಪ್ರಭು ಮುಕುಂದ ನಾಯ್ಕ, ಭರತ ಗಣಪತಿ ನಾಯ್ಕ ತಿಮ್ಮಪ್ಪ ವೆಂಕಟಪ್ಪ ನಾಯ್ಕ ಮತ್ತು ದಯಾನಂದ ತಿಮ್ಮಪ್ಪ ನಾಯ್ಕ ಸೇರಿದ ಒಟ್ಟೂ ೮ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದ ಆರೋಪಿಗಳಲ್ಲಿ ೩ ಜನರು ಪೊಲೀಸ್ ವಶಕ್ಕೆ ಸಿಕ್ಕಿದ್ದು ಉಳಿದ ೫ ( ವೆಂಕಟ್ರಮಣ,ಪ್ರಭು, ಭರತ,ತಿಮ್ಮಪ್ಪ, ದಯಾನಂದ) ಜನರು ತಲೆಮರೆಸಿಕೊಂಡಿದ್ದಾರೆ.
ಶುಕ್ರವಾರದ ಮಧ್ಯಾಹ್ನದಿಂದ ನಡೆಯುತಿದ್ದ ಮಣ್ಣು ಬರಾವ್ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಿಗಳು ಪಿರ್ಯಾದುದಾರರಾದ ನಾಗರಾಜ್ ನಾಯ್ಕರ ಕುಟುಂಬದ ಮೂವರ ಮೇಲೆ ಮಧ್ಯರಾತ್ರಿಯ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾರಾಯಣ,ಪರಶುರಾಮ, ಗಣಪತಿ ಎನ್ನುವ ಮೂರು ಜನರನ್ನು ವಶಕ್ಕೆ ಪಡೆದಿದ್ದಾರೆ.
