ಯಾವ ಬ್ರಾಹ್ಮಣರು ಒಂದು ರೂಪಾಯಿ ಕೊಟ್ಟು ಹೂವು, ಊದಿನಕಡ್ಡಿ ತರೋದಿಲ್ಲ: ಕೆ.ಎನ್ ರಾಜಣ್ಣ
ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ, ಹಚ್ಚೋದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆ: ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ, ಹಚ್ಚೋದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರನ್ನೂ ಮೇಲ್ವರ್ಗದವರೆಂದು ಕರೆಯಬಾರದು, ಹಾಗೆ ಕರೆದರೆ ನಾವು ಕೆಳವರ್ಗದವರು ಎಂದಾಗುತ್ತದೆ. ನಾವೇನು ಕೆಳವರ್ಗದವರಾ ಎಂಬಿತ್ಯಾದಿ ವ್ಯಾಖ್ಯಾನಗಳನ್ನು ಮಾಡಿದ ಅವರು ಈಗಿನ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುತ್ತಾ ಮೇಲಿನ ಮಾತನ್ನು ಹೇಳಿದರು.
ಬ್ರಾಹ್ಮಣರು ಈಗ ಹೋಮ ಹವನ ಕಡಿಮೆ ಮಾಡಿದ್ದಾರೆ. ಆದರೆ ನಾವೇ ಶೂದ್ರರೇ ಹೆಚ್ಚು ಹೋಮ, ಹವನ ಮಾಡುತ್ತಿದ್ದೇವೆ. . ಅವರು ಒಂದು ರೂಪಾಯಿ ಖರ್ಚು ಮಾಡಿ ಹೂವ, ಊದುಬತ್ತಿ ತರಲ್ಲ, ಬೇರೆಯವರು ತಂದಿದ್ದರಲ್ಲಿ ಪೂಜೆ ಮಾಡ್ತಾರೆ, ಹೀಗೆ ಹೇಳಿದರೆ ನಾನು ಬ್ರಾಹ್ಮಣರ ವಿರೋಧಿ ಅಂತ ಅಲ್ಲ, ಇದು ನಾನು ಹೇಳಿದ್ದಲ್ಲ ನನ್ನ ಸ್ನೇಹಿತರು ಹೇಳಿದ್ದು ಎಂದರು.
ನಾಯಕ ಸಮುದಾಯವರು ಈಗ ಡಿಸಿಎಂ ಆಗಬೇಕು ಮುಂದೆ ಸಿಎಂ ಆಗಬೇಕು. ನಾಯಕ ಸಮುದಾಯದಲ್ಲಿ ಸಿಎಂ ಆಗೋ ಅರ್ಹತೆ ಇರೋದು ಸತೀಶ್ ಜಾರಕಿಹೊಳಿಗೆ ಇದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯ ವ್ಯಕ್ತಿ ಸಿಎಂ ಆಗಬೇಕು ಎಂದು ರಾಜಣ್ಣ ಹೇಳಿದರು.
ಕಿಚ್ಚ ಸುದೀಪ್ ಅವರು ನನ್ನ ವಿರುದ್ಧವೇ ಭಾಷಣ ಮಾಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರೆ ಸುಮ್ಮನಾಗಬಹುದಿತ್ತು, ಆದರೆ ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿಯೂ ಅವರು ಪ್ರಚಾರ ಮಾಡಿದ್ದು ನೋವಾಗಿದೆ. ಒಂದೇ ಸಮುದಾಯದ ಇಬ್ಬರು ಸ್ಪರ್ಧೆ ಮಾಡಿದಾಗ ಒಬ್ಬರ ಪರವಾಗಿ ನಿಂತು ಪ್ರಚಾರ ಮಾಡಿದರು. ಇದರಿಂದ ನಮಗೆಲ್ಲಾ ಬೇಸರವಾಗಿದೆ” ಎಂದರು.
ಕೆಎನ್ ರಾಜಣ್ಣ ಮತ್ತು ಸುದೀಪ್ ಒಂದೇ ಸಮುದಾಯದವಾಗಿದ್ದು, ತಮ್ಮ ಕ್ಷೇತ್ರದಲ್ಲಿ ತಮ್ಮ ವಿರುದ್ಧವೇ ಸುದೀಪ್ ಪ್ರಚಾರ ಮಾಡಿದ್ದು ಸಚಿವ ಕೆ.ಎನ್. ರಾಜಣ್ಣ ಅವರ ಬೇಸರಕ್ಕೆ ಕಾರಣವಾಗಿದೆ. “ಇಬ್ಬರೂ ಅಭ್ಯರ್ಥಿಗಳು ಒಂದೇ ಸಮುದಾಯದವರು ಸ್ಪರ್ಧೆ ಮಾಡಿದಾಗ, ನಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದಕ್ಕೆ ಬೇಸರವಾಗಿದೆ. ಇನ್ನು ಮುಂದೆ ಅರ್ಥ ಮಾಡಿಕೊಂಡು ಮುಂದುವರೆಯಲಿ” ಎಂದು ಸಲಹೆ ನೀಡಿದರು. (kpc)