
ಶಿರಸಿಯ ಉದ್ಯಮಿ ಬೈಂದೂರು ಕನ್ಸಟ್ರಕ್ಷನ್ಸ್ ಮಾಲಿಕ ಎಂ.ಬಿ. ಬೈದೂರು ನಿರ್ಮಾಣದ ಕಿರಾತಕ ಚಿತ್ರ ಇದೇ ಜೂನ್ ಮೂವತ್ತರಂದು ತೆರೆಕಾಣುತ್ತಿದೆ. ಸೂಪರ್ ಹಿಟ್ ಚಿತ್ರವಾಗಿದ್ದ ಕಿರಾತಕ ನಂತರ ಕಿರಾತಕ ೨ ಕೂಡಾ ನಿರೀಕ್ಷೆ ಮೂಡಿಸಿದ ಚಿತ್ರ. ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ಬೈಂದೂರು ಬಹುಭಾಷಾ ಚಿತ್ರ ನಿರ್ಮಾಣದ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
