

ಸಭ್ಯ-ಸುಸಂಸ್ಕೃತರ ಊರಾದ ಸಿದ್ಧಾಪುರದಲ್ಲಿ ಹೊರರಾಜ್ಯದ ವಿದ್ಯಾರ್ಥಿನಿಯರು ಪಡ್ಡೆಗಳನ್ನು ಗುರಿಯಾಗಿಸಿ ಹಣ ಮಾಡುವ ದಂಧೆಗಿಳಿದಿರುವ ಬಗ್ಗೆ ಗಲ್ಲಿ ಚರ್ಚೆ ಪ್ರಾರಂಭವಾಗಿದೆ.
ನಗರದ ಹೊರವಲಯದ ಕಾಲೇಜಿನಲ್ಲಿ ಕಲಿಯುತ್ತಿರುವ ಹೊರರಾಜ್ಯದ ವಿದ್ಯಾರ್ಥಿನಿಯರು ತಮ್ಮ ಖಾಸಗಿ ಜಾಲದ ಮೂಲಕ ಪಡ್ಡೆಗಳನ್ನು ಆಕರ್ಷಿಸುತಿದ್ದು ಹಣದ ಆಸೆಗಾಗಿ ಪಡ್ಡೆಗಳನ್ನು ಖೆಡ್ಡಾಕ್ಕೆ ಕೆಡುವುತ್ತಿರುವ ಬಗ್ಗೆ ಜನಮಾನಸದಲ್ಲಿ ಆತಂಕ ಶುರುವಾಗಿದೆ.
ತಮ್ಮ ಆಪ್ತರು, ಖಾಸಗಿ ಸಂಪರ್ಕಗಳ ಮೂಲಕ ಮೊಬೈಲ್ ನಂಬರ್ ಸಂಗ್ರಹಿಸಿ ಕರೆಮಾಡುವ ಪಡ್ಡೆಗಳಿಗೆ ವಿಡಿಯೋ ಮೂಲಕ ಲೈಂಗಿಕ ಆಮಿಷ ಒಡ್ಡುವ ಕೆಲವು ವಿದ್ಯಾರ್ಥಿನಿಯರು ಇದನ್ನೇ ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಬಗ್ಗೆ ತಾಲೂಕಿನಾದ್ಯಂತ ಗುಸುಗುಸು ಪ್ರಾರಂಭವಾಗಿದೆ.
ಒಂದೆರಡು ಪ್ರಕರಣಗಳಲ್ಲಿ ಹೊರರಾಜ್ಯದ ಸುಂದರ ಹುಡುಗಿಯರು ಪಡ್ಡೆಗಳಿಗೆ ತಮ್ಮ ಮೊಬೈಲ್ ಸಂಪರ್ಕ ಸಂಖ್ಯೆ ಕೊಟ್ಟು ಹುಡುಗರ ಕುತೂಹಲ ತಣಿಸಿದರು. ಈ ಗುಪ್ತ ಸುದ್ದಿ ಪಿಸುಮಾತಾಗಿ ಅನೇಕರನ್ನು ತಲುಪಿ ಶಿರಸಿ ರಸ್ತೆಯ ಹೊರ ರಾಜ್ಯದ ಹುಡುಗಿಯರು ಹಣಕ್ಕಾಗಿ ಎಲ್ಲವನ್ನೂ ಕೊಡುತ್ತಾರೆ ಎನ್ನುವುದು ಗುಲ್ಲಾಯಿತು. ಈ ಗುಟ್ಟು-ಗುಲ್ಲಿನ ವಿಚಾರಗಳೆಲ್ಲಾ ಮೋಬೈಲ್ ಗಳಲ್ಲಿ ಹರಿದಾಡಿ ಈಗ ಇದು ಬೀದಿ ಚರ್ಚೆಯ ವಿಷಯವಾಗಿದೆ.
ಈ ಬಗ್ಗೆ ಕಾಲೇಜು, ಪೊಲೀಸರವರೆಗೂ ಸುದ್ದಿ ತಲುಪಿದ್ದರೂ ಇದರ ಮೇಲೆ ಕ್ರಮ ಜರುಗಿಸಿದ ಮಾಹಿತಿ ಇಲ್ಲ.
ಹಣ, ಸೆಕ್ಸು,ಸುಖಕ್ಕಾಗಿ ಏನೆಲ್ಲಾ ನಡೆಯುತ್ತಿರುವ ಕಾಲದಲ್ಲಿ ನಮ್ಮೂರಲ್ಲೊಂದು ಇಂಥದ್ದೆಲ್ಲಾ ಇಲ್ಲ ಎಂದು ಬೀಗುತಿದ್ದ ಜನತೆ ಈ ವಿಚಾರ ತಿಳಿದು ಆಶ್ಚರ್ಯ ಚಕಿತರಾಗಿದ್ದಾರೆ. ಈ ದಂಧೆ,ಹಣದ ವಹಿವಾಹಿಟಿನ ಅನೈತಿಕ ಆನ್ ಲೈನ್ ವ್ಯವಹಾರ ನಿಲ್ಲದಿದ್ದರೆ ದೊಡ್ಡ ಅಪಾಯ ಎನ್ನುವ ಹಿನ್ನೆಲೆಯಲ್ಲಿ ಸಮಾಜಮುಖಿ ಡಾಟ್ ನೆಟ್ ಈ ಸಾಮಾಜಿಕ ಕಾಳಜಿ ಮತ್ತು ಜಾಗೃತಿಯ ಬದ್ಧತೆಯಿಂದಾಗಿ ಈ ವರದಿ ಪ್ರಕಟಿಸುತ್ತಿದೆ. ಈ ಬಗ್ಗೆ ಎಲ್ಲಾ ಮಾಹಿತಿ,ದಾಖಲೆಗಳನ್ನು ಸಂಗ್ರಹಿಸಿರುವ ಸಮಾಜಮುಖಿ ಡಾಟ್ ನೆಟ್ ಅವುಗಳನ್ನು ಸಾಮದಾಯಿಕಹಿತಾಸಕ್ತಿ,ಗುಣಮಟ್ಟಗಳ ಹಿನ್ನೆಲೆಯಲ್ಲಿ ಗುಪ್ತವಾಗಿಟ್ಟಿದೆ.

ಈ ಪ್ರಕರಣದ ವ್ಯಕ್ತಿ ಸಿದ್ಧಾಪುರದವರಾದರೂ ಮಹಿಳೆ ಇಲ್ಲಿಗೆ ಸಂಬಂಧಿಸಿದವರಲ್ಲ ಈ ವೈರಲ್ ವಿಡಿಯೋ ವಿಚಾರವನ್ನು ಕೋಲಶಿರ್ಸಿ ಗ್ರಾ.ಪಂ. ವ್ಯಾಪ್ತಿಯ ಪ್ರತಿಷ್ಠಿತ ಕಾಲೇಜಿನ ವಿಷಯ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ವಾಸ್ತವದಲ್ಲಿ ಈ ಪ್ರಕರಣ ಮತ್ತು ಯಾವ ಕಾಲೇಜಿಗೂ ಯಾವ ಸಂಬಂಧವೂ ಇಲ್ಲ. ಇದನ್ನು ಕಾಲೇಜಿನ ವಿರೋಧಿ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳುತಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ನಲ್ಲಿ ದೂರು ದಾಖಲಾಗಿದ್ದು ಬಾಧಿತರು ತಮ್ಮ ಮೇಲೆ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡುವವರು ಸೃಷ್ಟಿಸಿದ ನಕಲಿ ವಿಡಿಯೋ ಇದು. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಎಂಬುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿವೆ.
