ಮದುವೆಯಾಗಲು ಕನ್ಯೆ ಸಿಗಲಿಲ್ಲ ಎಂದು ನೊಂದುಕೊಂಡ ೩೫ ವರ್ಷಗಳ ಯುವಕನೊಬ್ಬ ನೇಣು ಬಿಗಿದುಕೊಂಡು ಮೃತನಾದ ದುರ್ಘಟನೆ ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಕಿರಗಾರಿಮನೆಯ ನಾಗರಾಜ್ ಗಣಪತಿ ಗಾಂವ್ಕರ್ ಎಂದು ಗುರುತಿಸಲಾಗಿದೆ. ಮದುವೆಯಾಗುವ ಸತತ ವಿಫಲ ಪ್ರಯತ್ನ ಮಾಡಿದ ಈ ಕೃಷಿಕ ತನ್ನ ರೈತಾಪಿ ವೃತ್ತಿಗೆ ಸಿಗದ ಮಾನ್ಯತೆ (ಕನ್ಯೆ) ಹಿನ್ನೆಲೆಯಲ್ಲಿ ಗುರುವಾರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತನ್ನ ಮನೆಯ ಸಮೀಪದ ಗುಡ್ಡದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಗ್ಗೆ ಸ್ಥಳೀಯರು ಶಂಕಿಸಿದ್ದಾರೆ.
ಆರ್.ಬಿ.ಐ. ಕ್ವಿಜ್ ಮಾಸ್ಟರ್ : ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ. :
ಸಿದ್ದಾಪುರ: ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಬೆಂಗಳೂರು ಇತ್ತೀಚೆಗೆ ಕುಮಟಾದಲ್ಲಿ ಏರ್ಪಡಿಸಿದ್ದ
ಅಖಿಲ ಭಾರತ ಹಣಕಾಸು ಸಾಕ್ಷರತಾ ವಿಷಯದ ಕುರಿತು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ಹಳ್ಳಿಬೈಲ್ ಪ್ರೌಢಶಾಲೆ ವಿದ್ಯಾರ್ಥಿ ಕು. ವಿವೇಕ್ ಹೆಗಡೆ ಹಾಗೂ ಕು.ಅನಿಶಾ ಹೆಗಡೆ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಅರ್ಹತಾ ಸುತ್ತಿಗೆ ಆಯ್ಕೆ ಆಗಿಯಾಗಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ಮಾಡಿದ ಗುರುವೃಂದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಬಿ.ಆರ್.ಸಿ. ಸಮನ್ವಯಾಧಿಕಾರಿ ಚೈತನ್ಯಕುಮಾರ್ ಕೆ. ಎಮ್. ಎಸ್.ಡಿ.ಎಮ್.ಸಿ. ಅಧ್ಯಕ್ಷ ಮಂಜುನಾಥ ನಾಯ್ಕ ಹಾಗೂ ಪಾಲಕ ಪೋಷಕರು, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.