ಹಾವು ಎಂದರೆ… ಹೌಹಾರುವ ಜನರ ಮದ್ದೆ ಆರು ವರ್ಷಗಳ ವಿರಾಜ್ ಹಾವನ್ನು ಹಗ್ಗ,ಹೂವಿನಷ್ಟು ಸುಲಭವಾಗಿ ಪರಿಗಣಿಸುತ್ತಾನೆ. ಶಿರಸಿಯ ಪ್ರಶಾಂತ್ ಹುಲೇಕಲ್ ರ ಮಗ ಹಾವಿನ ಬಗ್ಗೆ ಭಯಮುಕ್ತಗಾಗಲು ಕಾರಣ ಅವನ ಹಾವಿನ ಜೊತೆಗಿನ ಒಡನಾಟ ಕಾರಣ. ಶಿರಸಿ ವಿರಾಜ್ ಅಜ್ಜ ಸುರೇಶ್ ಹಾವು ಹಿಡಿಯುವ ನಿಷ್ಣಾತ ವ್ಯಕ್ತಿಯಾಗಿದ್ದರು. ಅವರ ಮಗ ಪ್ರಶಾಂತ್ ಕೂಡಾ ನಾನಾ ರೀತಿಯ ಸಾವಿರಾರು ಹಾವು ಹಿಡಿದ ದಾಖಲೆ ಇದೆ. ಇಂಥ ಕುಟುಂಬದ ಕುಡಿ ವಿರಾಜ್ ಗೆ ಹಾವಿನ ಭಯವಿಲ್ಲ, ಬದಲಾಗಿ ಯಾವ ಹಾವನ್ನು ಹ್ಯಾಗೆ ಪಳಗಿಸಬೇಕೆಂಬ ಮಾಹಿತಿ ಇದೆ.
ಅಪ್ಪನ ಒಡನಾಟದಲ್ಲಿ ಹಾವಿನ ವೈಶಿಷ್ಟ್ಯ ಅರಿತಿರುವ ವಿರಾಜ್ ಈಗ ಒಂದನೇ ತರಗತಿ ಓದುತ್ತಿರುವ ಎಳೆಯ ಆದರೆ ಹಾವಿನ ವಿಚಾರದಲ್ಲಿ ಆತ ಮಾಸ್ಟರ್. ಆತನ ಸಾಹಸದ ಚಿತ್ರ-ವಿಡಿಯೋಗಳು ಇಲ್ಲಿವೆ.