


ಈ ನತದೃಷ್ಟನಿಗೆ ಬೆಂಬಲವಾಗಿ ನಿಂತಿದ್ದ ಅವರ ಸಹೋದರ ಬಿ.ಎಸ್. ಎನ್.ಡಿ.ಪಿ. ತಾಲೂಕಾಧ್ಯಕ್ಷ ವಿನಾಯಕ ನಾಯ್ಕ ಮತ್ತು ಕುಟುಂಬ ಈ ಆಘಾತದಿಂದ ನೊಂದು ನಿರಂತರ ಆರು ತಿಂಗಳು ಚಿಕಿತ್ಸೆ ಕೊಡಿಸಿದ್ದಾರೆ. ಅಂತಿಮವಾಗಿ ಪರಮೇಶ್ವರ ಮೃತರಾಗುತ್ತಲೇ ದುಖ:ದಲ್ಲಿದ್ದ ಕುಟುಂಬ ಅವರ ಕಣ್ಣನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮೃತ ಪರಮೇಶ್ವರ ನಾಯ್ಕ ಚಿಕ್ಕ ಮಗು, ಪತ್ನಿ,ಸಹೋದರ, ತಂದೆ-ತಾಯಿ ಸೇರಿದ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಪಘಾತದ ನೋವು, ಖರ್ಚಿನ ತೊಂದರೆ ನಡುವೆ ನೇತ್ರ ದಾನದ ಮೂಲಕ ಇತರರ ಕಣ್ಣು ತೆರೆಸಿದ ಈ ಕುಟುಂಬದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನೋವಿನಲ್ಲಿರುವ ಈ ಕುಟುಂಬದ ಬಗ್ಗೆ ಸಾಂತ್ವನದ ಮಾತುಗಳನ್ನಾಡಿರುವ ಅನೇಕರು ಈ ಕುಟುಂಬಕ್ಕೆ ಶಕ್ತರು ನೆರವಾಗುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

