


ಸಿದ್ಧಾಪುರ ತಾಲೂಕು ಲಂಬಾಪುರ ಗ್ರಾಮ ಪಂಚಾಯತ್ ನ ಗಾಳಮಾವಿನ ಕು,ವಿದ್ಯಾನಾಯ್ಕ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ಸಾಯಿ ವಿದ್ಯಾಸಂಸ್ಥೆಯಲ್ಲಿ ಕಲಾ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕ ಗಳಿಸಿದ್ದಕ್ಕೆ ಈ ಗೌರವ ಲಭಿಸಿದೆ ಎನ್ನಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ವಿದ್ಯಾರಿಗೆ ಇತ್ತೀಚೆಗೆ ಈ ಪದಕ ಪ್ರದಾನ ಮಾಡಿದರು.
ಸಿದ್ಧಾಪುರ ಲಂಬಾಪುರದ ಗಾಳಮಾವು ಕುಗ್ರಾಮವಾಗಿದ್ದು ಈ ಗ್ರಾಮದ ಬಾಲಕಿ ಮಾಡಿರುವ ಸಾಧನೆಗೆ ಸಾರ್ವಜನಿಕ ಮೆಚ್ಚುಗೆ ಪ್ರಾಪ್ತವಾಗಿದೆ.
