

ಸಾಗರದಲ್ಲಿ ವಿದ್ಯಾಭ್ಯಾಸ ಮಾಡುತಿದ್ದ ಸಿದ್ಧಾಪುರದ ವಿದ್ಯಾರ್ಥಿನಿ ಯೊಬ್ಬಳಿಗೆ ವಿಷ ಕುಡಿಸಿ ಸಾಯಿಸಿದ ಪ್ರಕರಣ ನಡೆದಿದೆ. ಶಿರಳಗಿ ಗ್ರಾಮದ ಪ್ರತಿಭಾವಂತೆ ಸಾಗರದಲ್ಲಿ ಬಿಸ್ಸಿ ಪದವಿ ಓದುತಿದ್ದಳು. ಈ ನತದ್ರಷ್ಟೆ ಯ ಹಿಂದೆ ಬಿದ್ದ ಸೊರಬದ ಖಾಸಗಿ ಪೈನಾನ್ಸ್ ಉದ್ಯೋಗಿಯೊಬ್ಬ ವಿದ್ಯಾರ್ಥಿನಿಗೆ ಬ್ಲಾಕ್ ಮೇ ಲ್ ಮಾಡಿ ವಿಷ ಪ್ರಾಶನ ಮಾಡಿಸಿದ ಬಗ್ಗೆ ಮೃತ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ ಹೇಳಿದ್ದಾಳೆ ಎನ್ನಲಾಗಿದೆ. ಸೊರಬ ಮೂಲದ ಧುರುಳ ನನ್ನು ಪೊಲೀಸ್ ರು ಬಂಧಿಸಿರುವುದಾಗಿ ಬಾತ್ಮಿದಾರರು samaajamukhi.net ಗೆ ತಿಳಿಸಿದ್ದಾರೆ. ಅಮಾಯಕ ಹುಡುಗಿಯರನ್ನು ವಂಚಿಸುವ ಇಂಥ ಧುರುಳ ರನ್ನು ಹೆಡೆಮುರಿಗೆ ಕಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
