

ರಾಣೆಬೆನ್ನೂರಿನ ಹಲಗೇರಿ ಬಳಿ ನಡೆದ ಭೀಕರ ಅಪಘಾತದಲ್ಲಿ ಶಿರಸಿಯ ಇಬ್ಬರು ಮೃತಪಟ್ಟಿದ್ದಾರೆ. ಶಿರಸಿಯ ಮಾರಿಕಾಂಬಾ ದೇವಾಲಯದ ಹಿಂಭಾಗದಲ್ಲಿ ನೆಲೆಸಿದ್ದ ಹುಲೇಕಲ್ ಮೂಲದ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದು ಅವರನ್ನು ವಿಠ್ಠಲ್ ಮತ್ತು ಜಯಂತಿ ದಿನೇಶ್ ಶೇಟ್ ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಕ್ಕೆ ಕಾರು ಡಿಕ್ಕಿ ಹೊಡೆದು ಈ ಅವಗಢ ನಡೆದಿದೆ ಎನ್ನಲಾಗಿದೆ.
