

ಸಿದ್ಧಾಪುರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಈಗ ಸಹಾಯಕ ನಿರ್ಧೇಶಕರಾಗಿ ಪದೋನ್ನತಿ ಹೊಂದಿರುವ ಸಿದ್ಧಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಮಂಗೇಶ್ ಜಿ. ನಾಯ್ಕರನ್ನು ಅಡಿಕೆ ವರ್ತಕರ ಸಂಘದ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಡಿಕೆ ವರ್ತಕರು, ಸಹಕಾರಿ ಸಂಘಗಳ ಪ್ರಮುಖರು ಸೇರಿದ್ದ ಈ ಸಭೆಯಲ್ಲಿ ಮಂಗೇಶ್ ನಾಯ್ಕರ ಸರಳತೆ, ಜನಪರತೆಯನ್ನು ಕೊಂಡಾಡಲಾಯಿತು.

೧೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಸಿದ್ಧಾಪುರದ ವರ್ತಕರು,ಸಹಕಾರಿ ಸಂಘಗಳಿಗೆ ನೆರವಾದ ಬಗ್ಗೆ ಟಿ.ಎಂ.ಎಸ್. ಅಧ್ಯಕ್ಷ ಆರ್. ಎಂ. ಹೆಗಡೆ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಕೆ.ಜಿ. ನಾಗರಾಜ್, ಕೆ.ಕೆ.ನಾಯ್ಕ, ವರ್ತಕರ ಪರವಾಗಿ ಆರ್. ಎಸ್. ಹೆಗಡೆ ಹರಗಿ ಸೇರಿದಂತೆ ಕೆಲವರು ಕೃತಜ್ಞತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವ ದೀಪಾ ಪಾಟೀಲ್ ರನ್ನು ಸ್ವಾಗತಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗೇಶ್ ನಾಯ್ಕ ತನ್ನ ಸೇವಾವಧಿಯಲ್ಲಿ ಸಿದ್ಧಾಪುರ ಮತ್ತು ಇಲ್ಲಿಯ ಸಹೃದಯರನ್ನು ಮರೆಯುವಂತಿಲ್ಲ ನಮ್ಮ ಮಿತಿಯಲ್ಲಿ ಅನೇಕರ ಸಹಕಾರದಿಂದ ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡಲು ಸಹಕರಿಸಿದ ರೈತರು, ವರ್ತಕರು, ಕೃಷಿಉತ್ಪನ್ನ ಮಾರುಕಟ್ಟೆ ಸಮೀತಿ ನಿರ್ಧೇಶಕರ ಸಹಕಾರ ಸ್ಮರಣೀಯ ಎಂದರು.
ಮಂಗೇಶ್ ನಾಯ್ಕರ ಸರಳತೆ, ಜನಪರತೆ,ಸ್ನೇಹಪರತೆಯ ಹಿಂದೆ ಕಾರವಾರದ ಮಣ್ಣಿನ ಗುಣ ಅಡಗಿದೆ ಎಂದು ಪತ್ರಕರ್ತ ಕೋಲಶಿರ್ಸಿ ಕನ್ನೇಶ್ ಶ್ಲಾಘಿಸಿದರು.
