ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಉಳಿಸುವ ಜೊತೆಗೆ ಸೌಹಾರ್ದತೆಯ ಶ್ರೇಷ್ಠ ಪರಂಪರೆಗೆ ದುಡಿದಿದೆ. ಪ್ರತಿಯೊಬ್ಬರು ಕನ್ನಡತನ ಕಾಪಾಡುವ ಜೊತೆಗೆ ಐಕ್ಯತೆ ಉಳಿಸಲು ಶ್ರಮಿಸಬೇಕು ಎಂದು ಉತ್ತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಕರೆ ನೀಡಿದರು. ಸಿದ್ಧಾಪುರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಪರಿಷತ್, ಸಿದ್ಧಾಪುರ ತಾಲೂಕಾ ಕ.ಸಾ.ಪ. ಆಶ್ರಯದಲ್ಲಿ ನಡೆದ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡ ಎಂದರೆ ಸೌಹಾರ್ಧಪರಂಪರೆಯ ಧ್ಯೋತಕ, ಕನ್ನಡತನ ಉಳಿಸುವ ಜೊತೆಗೆ ಧರ್ಮ,ಧರ್ಮಗಳು ಜಾತಿ-ಜಾತಿಗಳ ನಡುವಿನ ಐಕ್ಯತೆ ಕಾಪಾಡಿದರೆ ಅದು ಕನ್ನಡ ಸೇವೆಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಈ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ. ನಾಯ್ಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಹೆಮ್ಮೆಯ ಸಂಸ್ಥೆ ಜಿಲ್ಲೆಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಗಳು ಉತ್ತಮ ಕೆಲಸ ಮಾಡುತ್ತಿವೆ ಎಂದರು. ಕಾರ್ಯಕ್ರಮದ ಅಂಗವಾಗಿ ನೂತನ ಕ್ಷೇತ್ರಶಿಕ್ಷಣಾಧಿಕಾರಿ ಜಿ.ಆಯ್. ನಾಯ್ಕ ಮತ್ತು ತಾ.ಪಂ.ಕಾ.ನಿ.ಅ. ದೇವರಾಜ್ ಹಿತ್ತಲಕೊಪ್ಪರನ್ನು ಗೌರವಿಸಿ, ಸ್ವಾಗತಿಸಲಾಯಿತು.
ಸಿದ್ಧಾಪುರದ ರ್ಯಾಂಕ್ ವಿಜೇತರು ಮತ್ತು ಕನ್ನಡ ವಿಷಯದಲ್ಲಿ ಪ್ರತಿಶತ೧೦೦ ಅಂಕ ಗಳಿಸಿದ ೯೩ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.