ಪ್ರವಾಹ ನಿರ್ವಹಣೆ ಸಿದ್ಧತೆ ಮತ್ತು ಸಾಧ್ಯತೆ ಬಗ್ಗೆ ನಡೆದ ಸಭೆಯಲ್ಲಿ ನಕ್ಕು ಬಣ್ಣಗೇಡಾದ ಅಧಿಕಾರಿಗೆ ಸಿರೀಯಸ್ ಆಗಿ ವರ್ತಿಸಲು ಶಾಸಕ ಭೀಮಣ್ಣ ನಾಯ್ಕ ತಿಳಿಹೇಳಿ ಆದೇಶಿಸಿದ ಪ್ರಸಂಗ ಇಂದು ನಡೆಯಿತು.
ಸಿದ್ಧಾಪುರದ ತಹಸಿಲ್ದಾರ ಕಛೇರಿ ಸಭಾಂಗಣದಲ್ಲಿ ಭೀಮಣ್ಣ ನಾಯ್ಕ ಪ್ರವಾಹ ನಿರ್ವಹಣೆ ಪರಿಶೀಲನೆ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಬಹುತೇಕ ಎಲ್ಲಾ ಅಧಿಕಾರಿಗಳೂ ತಮ್ಮ ಸಾಧನೆಗಳ ವರದಿ ನೀಡಿದರು. ಪ್ರವಾಹದ ಮುನ್ನೆಚ್ಚರಿಕೆ ಬಗ್ಗೆ ವಿಚಾರಿಸಿದ ಭೀಮಣ್ಣ ನಾಯ್ಕ ಅಗ್ನಿಶಾಮಕ ಅಧಿಕಾರಿ ಎಲ್ಲಿ ಎಂದು ಪ್ರಶ್ನಿಸಿದರು. ಸಭೆಯಲ್ಲಿ ಹಾಜರಿರದ ಅಗ್ನಿಶಾಮಕ ಅಧಿಕಾರಿಯನ್ನು ತಹಸಿಲ್ಧಾರರ ಮೂಲಕ ಸಭೆಗೆ ಕರೆಸಲಾಯಿತು. ಸಭೆಗೆ ಬಂದ ಅಗ್ನಿಶಾಮಕ ಅಧಿಕಾರಿ ಪ್ರವಾಹ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿ ನೀಡದೆ ವಿಚಿತ್ರವಾಗಿ ವರ್ತಿಸತೊಡಗಿದರು. ಬೇಜಬಾಬ್ಧಾರಿ,ಸೀರಿಯಸ್ ಆಗದೆ ಉಪೇಕ್ಷೆ ಮಾಡಿದ ಅಗ್ನಿಶಾಮಕ ಅಧಿಕಾರಿಗೆ ಮೆಲ್ಲಗೆ ಗದುರಿಸಿದ ಶಾಸಕರು ಅಧಿಕಾರಿಗಳು, ನೌಕರರು ಈ ರೀತಿ ವರ್ತಿಸದಂತೆ ಸೂಚಿಸಿ ಎಂದು ತಹಸಿಲ್ಧಾರರಿಗೆ ಆದೇಶಿಸಿದರು.
ಪ್ರವಾಹ ನಿರ್ವಹಣೆಗೆ ಬೇಕಾಗುವ ಬೋಟ್ (ದೋಣಿ) ಇದೆಯೆ ಎಂದು ಕೇಳಿದ್ದಕ್ಕೆ ಉದಾಸೀನದಿಂದ ಉತ್ತರಿಸಿ ಪೇದೆಯಂತೆ ನಡೆದುಕೊಂಡ ಅಗ್ನಿಶಾಮಕ ಅಧಿಕಾರಿಯ ವಿಚಿತ್ರ ವರ್ತನೆ ಶಾಸಕರ ಬೇಸರಕ್ಕೆ ಕಾರಣವಾಯಿತು.
ಮುಚ್ಚಿದ ಶಾಲೆಗಳ ವಿದ್ಯಾರ್ಥಿಗಳಿಗೆ ಸಮೀಪದ ಶಾಲೆಗಳಿಗೆ ತೆರಳಲು ಅವಶ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಶೀಘ್ರದಲ್ಲೇ ಸರ್ಕಾರ ಹೊಸ ವ್ಯವಸ್ಥೆ ಮಾಡಲಿದೆ. -ಭೀಮಣ್ಣ ನಾಯ್ಕ, ಶಾಸಕ