
ಮಳೆಗಾಲದಲ್ಲಿ ಮಲೆನಾಡು ಚೆಂದ ಇಲ್ಲಿಯ ಗುಡ್ಡ,ಬೆಟ್ಟ,ಜಲಪಾತ, ಜಲಧಾರೆಗಳು ಪ್ರಕೃತಿಯ ಸೊಬಗನ್ನು ವಿಜೃಂ ಬಿಸುತ್ತವೆ. ನೀವೀಗ ನೋಡುತ್ತಿರುವ ಅತಿ ಎತ್ತರದ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭೀಮನಗುಡ್ಡ ಈ ಗುಡ್ಡ ಸಮುದ್ರದಿಂದ ೬೩೬ ಮೀಟರ್ ಎತ್ತರದಲ್ಲಿದೆ.
ಮಳೆಗಾಲದ ಪ್ರಾರಂಭದಿಂದ ಬೇಸಿಗೆ ಮುಗಿಯುವವರೆಗೆ ಎಲ್ಲಾ ಕಾಲಗಳಲ್ಲೂ ನೋಡಿ ಮೈಮರೆಯಬಹುದಾದ ಈ ಭೀಮನಗುಡ್ಡ ಸಿದ್ಧಾಪುರ ತಾಲೂಕಿನಿಂದ ನಾಲ್ವತ್ತು ಕಿಲೋ ಮೀಟರ್ ದೂರದ ನಿಲ್ಕುಂದ ಪಂಚಾಯತ್ ವ್ಯಾಪ್ತಿಯಲ್ಲಿದೆ. ನೆರೆಯ ಶಿರಸಿ ತಾಲೂಕುಕೇಂದ್ರದಿಂದ ೩೦ ಕೀಲೋಮೀಟರ್ ದೂರದ ಈ ಭೀಮನಗುಡ್ಡ ಸಿದ್ಧಾಪುರ ಮತ್ತು ಕುಮಟಾ ತಾಲೂಕುಗಳ ಗಡಿಗಳಿಗೆ ಹೊಂದಿಕೊಂಡಿದೆ. ಹೆಗ್ಗರಣೆ ಶಿರಸಿ ರಸ್ತೆಇಂದ ಒಂದುಕಿಲೋಮೀಟರ್ ದೂರದ ಈ ಭೀಮನಗುಡ್ಡ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ.
ಮಳೆಗಾಲದ ನಂತರ ಇಲ್ಲಿಯ ಪ್ರವಾಸ ಸುರಕ್ಷಿತ, ಅನುಕೂಲಕರವಾದರೂ ಮಲೆನಾಡ ಮಳೆಯ ಸುಬಗು ಕಾಣುವವರು ಮಳೆಯಲ್ಲೇ ಇಲ್ಲಿಗೆ ಬರುತ್ತಾರೆ. ಎತ್ತರದ ಭೀಮಣಗುಡ್ಡ ವೀಕ್ಷಣಾ ಕೇಂದ್ರದಿಂದ ಅಘನಾಶಿನಿ ನದಿ ಹರಿಯುವ ಪಶ್ಚಿಮಘಟ್ಟದ ಕಣಿವೆ ನೋಡಲು ಅದ್ಭುತ ಜಾಗದಂತಿರುವ ಈ ಭೀಮಣಗುಡ್ಡ ಮಂಜಿನಲ್ಲಿ ಮಲಗಿದಾಗ ಇದರ ಸೌಂದರ್ಯ ವರ್ಣಿಸಲಸಾಧ್ಯ ಊಟಿ,ಆಗುಂಬೆಯ ವಾತಾವರಣ ನೆನಪಿಸುವ ಇಲ್ಲಿಯ ಪ್ರಕೃತಿಯ ಸೊಬಗು ಈ ಯುವ ಜನರ ಆಯ್ಕೆಯಾಗಿ ಪ್ರಸಿದ್ಧವಾಗುತ್ತಿದೆ. ಅರಣ್ಯ ಇಲಾಖೆಯ ಕಣ್ಗಾವಲಿನ ರಕ್ಷಿತಾರಣ್ಯ ಪ್ರದೇಶದ ಈ ಭೀಮಣಗುಡ್ಡ ಏರಲು ಅರಣ್ಯ ಇಲಾಖೆಯ ಅನುಮತಿ ಬೇಕು. ಅರಣ್ಯ ಇಲಾಖೆಯ ಪಾಸ್ ಪಡೆದು ನಿರ್ಬಂಧಗಳಿಗೊಳಪಟ್ಟು ವೀಕ್ಷಿಸಬೇಕಾದ ಈ ಪ್ರಕೃತಿಯ ಸೊಬಗನ್ನು ನೋಡಲು ಜನ ಸಾಗರದೋಪಾದಿಯಲ್ಲಿ ಬರುತ್ತಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿ. ಪ್ರವಾಸಿಗರಿಗೆ ಅದರಷ್ಟವಿದ್ದರೆ ಈ ಪ್ರದೇಶದಲ್ಲಿ ವನ್ಯಮೃಗಗಳೂ ಕಾಣಿಸಿಕೊಳ್ಳಬಹುದು.
