

ಸಾಗುವಳಿದಾರರ ಪಹಣಿಪತ್ರಿಕೆಯ ಕರ್ನಾಟಕ ಸರ್ಕಾರ ತೆಗೆಯಲು ಇಚ್ಛಾಶಕ್ತಿ ಬೇಕು. ಇಶ್ಛಾಶಕ್ತಿಯ ಕೊರತೆಯಿಂದ ಗೇಣಿದಾರರು ಈಗಲೂ ಭೂಮಾಲಿಕರಾಗದಿರುವುದು ವಿಷಾದದ ಸಂಗತಿ ಎಂದು ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಬೇಸರಿಸಿದರು.
ಸಿದ್ಧಾಪುರದಲ್ಲಿ ಸಮಾಜಮುಖಿ ಡಾಟ್ ನೆಟ್ ವೆಬ್ ನ್ಯೂಸ್ ಜೊತೆ ಮಾತನಾಡಿದ ಅವರು ನಾಯಕರಾದವರಿಗೆ ಬದ್ಧತೆ,ಇಶ್ಛಾಶಕ್ತಿ ಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಗೇಣಿದಾರರಿಗೆ ಭೂಮಾಲಿಕತ್ವದ ಹಕ್ಕು ಕೊಡುವ ವಿಚಾರದಲ್ಲಿ ನಾವು ಯಶಸ್ವಿಯಾಗಿದ್ದೇವೆ ಇಲ್ಲೇಕೆ ಈಗಲೂ ಈ ಸಮಸ್ಯೆ ಎಂದು ಪ್ರಶ್ನಿಸಿದ ಅವರು.
ಭೂಮಿ ಹೋರಾಟ, ಭೂಮಿ ಹಕ್ಕಿಗಾಗೇ ನಾವು ಜೀವನ ಪರ್ಯಂತ ಚಳವಳಿ ಮಾಡಿದ್ದೇವೆ. ಫಾರಂ ನಂ ೭ ,೭ಎ. ತೊಂದರೆಯ ಕರ್ನಾಟಕ ಸರ್ಕಾರದ ಯಜಮಾನತ್ವ ಹಿಂದೆ ಪಡೆಯಲು ಸಾಕಷ್ಟು ಅವಕಾಶ ಕೊಟ್ಟಾಗಲೂ ಮಾಡಿಕೊಳ್ಳದ ನತದೃಷ್ಟರಿಗಾಗಿ ಸರ್ಕಾರ ಹೊಸ ಆದೇಶ ಮಾಡಬೇಕು ಈ ಆದೇಶಕ್ಕೆ ಕ್ಯಾಬಿನೇಟ್ ತೀರ್ಮಾನ ಬೇಕು. ಕೆಲವೇ ಜಿಲ್ಲೆಗಳ ಅರಣ್ಯ ಭೂಮಿ ಮಾಲಿಕತ್ವ ಸಮಸ್ಯೆ, ಪಹಣಿ ಪತ್ರಿಕೆಯ ಕರ್ನಾಟಕ ಸರ್ಕಾರ ರದ್ಧತಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮಾತನಾಡಿ ಕಾಯಿದೆ ರೂಪಿಸಬೇಕು ಎಂದು ಸಲಹೆ ನೀಡಿದರು.
