

ಬಿ.ಕೆ.ಹರಿಪ್ರಸಾದ್ ಸಮರ್ಥರು.ಬುದ್ದಿವಂತರೂ,ಹಿರಿಯರೂ ಆಗಿದ್ದರೂ ಅವರಿಗೆ ಸಚಿವರನ್ನಾಗಿ ಮಾಡದಿರುವುದು ಅನ್ಯಾಯವಲ್ಲ ಎಂದಿರುವ ಕಾಗೋಡು ತಿಮ್ಮಪ್ಪ ಬಿ.ಕೆ.ಹರಿಪ್ರಸಾದ್ ರಿಗೆ ಕ್ಷೇತ್ರ ಇಲ್ಲದಿರುವುದು ನ್ಯೂನ್ಯತೆ ಎಂದಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಎಲ್ಲರಿಗೂ ನ್ಯಾಯ ಒದಗಿಸುವುದು ಕಷ್ಟ ಹಾಗೆ ನೋಡಿದರೆ ಸಕ್ರೀಯವಾಗಿರುವ ದೇಶಪಾಂಡೆ ಸಚಿವರಾಗದೆ ಹೊರಗಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಈಡಿಗರಿಗೆ ರಾಜಕೀಯವಾಗಿ ಪ್ರಾಮುಖ್ಯತೆ, ಪ್ರಾಧಾನ್ಯತೆ ಸಿಗುತ್ತಿಲ್ಲ ಎನ್ನುವ ಅಸಮಾಧಾನ ವಿದೆಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈಡಿಗರು ಸದನದಲ್ಲಿ ಚುರುಕಾಗಿ, ಅಧ್ಯಯನಪೂರ್ಣವಾಗಿ ಮಾತನಾಡುತ್ತಾ ಗುರುತಿಸಿಕೊಂಡರೆ ಅವಕಾಶ ಸಿಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
