


ಸಿಕಂದರಾಬಾದ್ ನಲ್ಲಿ ಮಿಲಟರಿ ಸೇವೆಯಲ್ಲಿದ್ದ ಕೋಲೋನೆಲ್ ಗಿರೀಶ್ ಎಸ್. ನಾಯ್ಕ ಮಂಗಳವಾರ ಪೂನಾದ ಮಿಲಿಟರಿ ಆಸ್ಫತ್ರೆಯಲ್ಲಿ ನಿಧನರಾಗಿದ್ದಾರೆ. ಮಿಲಟರಿ ಅಧಿಕಾರಿಯಾಗಿದ್ದ ಗಿರೀಶ್ ಮೂಲತ: ಸಿದ್ಧಾಪುರ ತಾಲೂಕಿನ ಮನ್ಮನೆ ಗ್ರಾಮದವರಾಗಿದ್ದು ಅಲ್ಪಕಾಲಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಸೇವೆಯಲ್ಲಿದ್ದಾಗಲೇ ಮೃತರಾಗಿದ್ದಾರೆ.
ಗಿರೀಶ್ ಇಬ್ಬರು ಪುತ್ರರು,ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ೫೬ ವರ್ಷಗಳ ಇವರು ತಮ್ಮ ೫೮ ನೇ ವಯಸ್ಸಿಗೆ ನಿವೃತ್ತರಾಗಲಿದ್ದರು. ಮೃತರ ಅಂತ್ಯ ಸಂಸ್ಕಾರ ಸರ್ಕಾರಿ ಗೌರವಗಳೊಂದಿಗೆ ಇಂದು ರಾತ್ರಿ ನಡೆಯಲಿದೆ. ಗಿರೀಶ್ ಮನ್ಮನೆಯ ಧೀರ ಯೋಧರಾಗಿ ಸಾಗರದಲ್ಲಿ ಸ್ವತ: ಮನೆ ಹೊಂದಿದ್ದರು. ತಮ್ಮೂರ ಯೋಧನ ಅಂತ್ಯಕ್ರೀಯೆಗೆ ಮನ್ಮನೆಯ ನಾಗರಿಕರು ಸಿದ್ಧತೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
