ಎಲ್ಲೆಂದರಲ್ಲಿ ಕಾಣಸಿಗುವ ಜಲಪಾತಗಳನ್ನು ನೋಡಲು ಈಗ ಸುಗ್ಗಿ.
ನಿರಂತರ ಮಳೆಯ ನಂತರ ಕಣ್ಣು ಬಿಟ್ಟಿರುವ ಸೂರ್ಯ ಬೆಳಕು ಚೆಲ್ಲಿ ಜಲಪಾತಗಳ ಸೊಬಗನ್ನು ಹೆಚ್ಚಿಸಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಈ ಪರಿಸರ, ಜಲಪಾತ, ಮಳೆಗಾಲದ ವಾತಾವರಣ ಪ್ರವಾಸಿಗರಿಗೆ ಸ್ವರ್ಗಸದೃಶ ಅನುಭವ ಉಣಬಡಿಸುತ್ತಿದೆ. ಜಾಗೃತಿ, ಎಚ್ಚರಿಕೆ, ಜವಾಬ್ಧಾರಿಗಳಿಂದ ಪ್ರವಾಸಿಗರು ವರ್ತಿಸಿದರೆ ಅಪಾಯದ ಸಾಧ್ಯತೆ ಕಡಿಮೆ. ಮಲೆನಾಡು, ಅರೆ ಬಯಲುಸೀಮೆ,ಕರಾವಳಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಪರಿಸರ ವೈವಿಧ್ಯ ಇಲ್ಲಿಯ ಜನಜೀವನ, ಪ್ರವಾಸಿ ಸೊಬಗನ್ನು ಹೆಚ್ಚಿಸಿದೆ. ನೆನಪಿಡಿ ಆಗಸ್ಟನಿಂದ ಫೆಬ್ರುವರಿ ತಿಂಗಳುಗಳ ಒಳಗಿನ ಮಳೆಗಾಲ, ಚಳಿಗಾಲದ ಸಮಯ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಹೇಳಿಮಾಡಿಸಿದ ಅವಧಿ.
ಮಲೆನಾಡಿನ ಸೊಬಗನ್ನು ಕಂಡು ಎಲ್ಲೆಲ್ಲಿ ಸೊಬಗಿದೆ ಎಂದು ಹಾಡಿ ಹೊಗಳಲಾಗಿದೆ.ಮಳೆಗಾಲದ ಮಲೆನಾಡೆಂದರೆ ಹೊಸವಸ್ತ್ರ ಉಟ್ಟ ಸುಂದರಿಯಂತೆ ಇಲ್ಲಿನ ಕಾಡು, ಜಲ,ನೀರು ಜಲಪಾತಗಳನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಈ ವರ್ಷದ ವಿಳಂಬಿತ ಮಳೆಗಾಲ ತುಸು ಲೇಟಾಗೇ ಮಳೆನಾಡಿನ ಬೈಭವ ಮರಳಿಸಿದೆ.
ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಸ್ವರ್ಗ ಎಂದು ಕರೆಯಲಾಗುತ್ತದೆ.ಇಲ್ಲಿರುವ ಅಸಂಖ್ಯ ಜಲಪಾತಗಳು ಇಲ್ಲಿಯ ಸೌಂದರ್ಯವನ್ನು ವೃದ್ಧಿಸಿವೆ. ಜಿಲ್ಲೆಯ ೧೨ ತಾಲೂಕುಗಳಲ್ಲಿ ೨೦ ಕ್ಕೂ ಹೆಚ್ಚು ಜಲಪಾತಗಳಿರುವುದು ಇಲ್ಲಿಯ ಪ್ರಾಮುಖ್ಯತೆಗೆ ಸಾಕ್ಷಿ.
ಪ್ರತಿ ತಾಲೂಕಿನಲ್ಲಿಯೂ ಇರುವ ಆಣೆಕಟ್ಟು, ಜಲಾಗಾರ, ನದಿ ತೊರೆಗಳು ಇಲ್ಲಿ ಜಲಪಾತಗಳನ್ನು ಸೃಷ್ಟಿಸಿವೆ.
ಪ್ರವಾಸಿಗರಿಗೆ ಜೋಗಜಲಪಾತ, ಉಂಚಳ್ಳಿ ಫಾಲ್ಸ್, ಮಾಗೋಡು, ಬೂದಗಿತ್ತಿ ಜಲಪಾತಗಳು ಚಿರಪರಿಚಿತ.ಇವಲ್ಲದೆ ಶಿವಮೊಗ್ಗ ಜಿಲ್ಲೆಯ ಜೋಗ ಭಾಗದಿಂದ ಹೊರಟರೆ ಹುಸೂರು ಜಲಪಾತ, ಶಿರಲಗದ್ದೆ ಜಲಪಾತ,ತುಂಬ್ರಗೋಡು ಜಲಪಾತ, ಉಂಚಳ್ಳಿ ಜಲಪಾತ ಶಿವಗಂಗೆ ಜಲಪಾತ, ವಿಭೂತಿ ಜಲಪಾತ ವಜ್ರಳ್ಳಿ ಜಲಪಾತ ಹೀಗೆ ಪ್ರತಿ ರಸ್ತೆ, ಹೈವೆ, ತಾಲೂಕು ಕೇಂದ್ರದ ರಸ್ತೆಮೂಲಕ ಹೊರಟರೆ ಆ ದಾರಿ ಯಾವುದಾದರೊಂದು ಜಲಪಾತ ತಲುಪಿಸುತ್ತದೆ.
ಹೀಗೆ ಎಲ್ಲೆಂದರಲ್ಲಿ ಕಾಣಸಿಗುವ ಜಲಪಾತಗಳನ್ನು ನೋಡಲು ಈಗ ಸುಗ್ಗಿ.