

ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಸೌಹಾರ್ದ ಸಹಕಾರಿ ಈ ವರ್ಷ೪೭ ಲಕ್ಷ ೫೩ ಸಾವಿರ ೫೪೩ ರೂ. ಲಾಭ ಗಳಿಸಿದೆ ಎಂದು ಪ್ರಕಟಿಸಿದೆ. ಇತ್ತೀಚೆಗೆ ಸಿದ್ಧಾಪುರ ರಾಘವೇಂದ್ರ ಮಠದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ವಾರ್ಷಿಕ ಅಡಾವೆ ಪತ್ರಿಕೆ ಬಿಡುಗಡೆ ಮಾಡಿದ ಸಂಸ್ಥೆ ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಈ ವಿಷಯ ಘೋಷಿಸಿದೆ.
ಈ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ನಿರ್ಧೇಶಕ ಮಂಡಳಿ ಸಂಪೂರ್ಣ ಕಾರ್ಯ ಕಲಾಪಗಳನ್ನು ವಿವರಿಸಿತು. ಅಧ್ಯಕ್ಷತೆ ವಹಿಸಿದ್ದ ವಿನಾಯಕ ಸಹಕಾರಿ ಸೌಹಾರ್ದ ಅಧ್ಯಕ್ಷ ಆನಂದ ನಾಯ್ಕ ತಮ್ಮ ಸಂಸ್ಥೆ ಸಾಮಾಜಿಕ ಜವಾಬ್ಧಾರಿಗಳ ಜೊತೆ ವ್ಯಾವಹಾರಿಕ ಪಾರದರ್ಶಕತೆಯನ್ನು ಕಾಯ್ದುಕೊಂಡು ಲಾಭದತ್ತ ಮುನ್ನಡೆಯುತ್ತಿದೆ. ಇದಕ್ಕೆ ಸಂಸ್ಥೆಯ ಸದಸ್ಯರ ಸಹಕಾರ ಕಾರಣ ಎಂದರು. ಮಹಾಬಲೇಶ್ವರ ನಾಯ್ಕ ಸರ್ವರನ್ನೂ ಸ್ವಾಗತಿಸಿದರು. ಶ್ರೀಧರ ಹೆಗಡೆ ನಿರ್ವಹಿಸಿದರು.
- ಲಾಭಾಂಶ ಹಂಚಿಕೆ-೧೫%
- ಸಾಮಾನ್ಯ ಮೀಸಲು ನಿಧಿ ೧೫%
- ಸಹಕಾರಿ ಶಿಕ್ಷಣ ನಿಧಿ ೨%
- ಶ್ರೀ ವಿನಾಯಕ ಸಮಾಜಸೇವಾ ನಿಧಿ೨%
- ಸಾಮಾನ್ಯ ಸೇವಾ ನಿಧಿ ೫%
- ಕಾ.ಮೀ.ನಿಧಿ೨೦%
- ಕಟ್ಟಡ ನಿಧಿ ೧೦%
