



ಸಿದ್ದಾಪುರ
ತಾಲೂಕಿನ ಹಿರೇಹದ್ದದ ಆಧಾರ ಷಡ್ಜ ಗುರುಕುಲ ದ ಸ್ವರ ಸಮ್ಮಿಲನ ಸಂಗೀತ ಕಾರ್ಯಕ್ರಮ ಹೆಗ್ಗರಣಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಆರಂಭದಲ್ಲಿ ಆಧಾರ ಷಡ್ಜ ಗುರುಕುಲದ ಹಿರಿ-ಕಿರಿಯ ವಿದ್ಯಾರ್ಥಿಗಳಿಂದ ಗಾಯನ ನಡೆಯಿತು ಅವರಿಗೆ ತಬಲಾದಲ್ಲಿ ಶಂಕರ ಹೆಗಡೆ ಹಿರೇಮಕ್ಕಿ ಹಾಗೂ ಗಣೇಶ ಹೆಗಡೆ ಬಿಳೆಕಲ್ ಸಹಕರಿಸಿದರು.
ನಿಲ್ಕುಂದ ಗ್ರಾಪಂ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೆಕಲ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಮುಖ್ಯಾಧ್ಯಾಪಕ ಜಿ.ಆರ್.ಭಾಗ್ವತ್ ತ್ಯಾರಗಲ್, ಎಸ್.ವಿ.ಹೆಗಡೆ ಹಿರೇಹದ್ದ, ಹೆಗ್ಗರಣಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಗುರುಶಾಂತ ಸಿ.ಎಂ, ವೇ.ವಿನಾಯಕ ಭಟ್ಟ ಹೆಗ್ಗಾರಬೈಲ್, ಅನಂತ ಹೆಗಡೆ ವಾಜಗರು, ಲಕ್ಷ್ಮೀಶ ಭಟ್ಟ ಉಂಚಳ್ಳಿ ಉಪಸ್ಥಿತರಿದ್ದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ ಹಿರೇಹದ್ದ ಅವರ ಗಾಯನಕ್ಕೆ ಅನಂತ ಹೆಗಡೆ ವಾಜಗಾರ ತಬಲಾದಲ್ಲಿ ಹಾಗೂ ಅಜಯ್ ಹೆಗಡೆ ಬೆಣ್ಣೆಮನೆ ಸಂವಾದಿನಿಯಲ್ಲಿ ಸಾಥ್ ನೀಡಿದರು. ತಂಬೂರದಲ್ಲಿ ಗಣೇಶ ಹೆಗಡೆ, ಅನೀಶ್ ಹೆಗಡೆ ಹಾಗೂ ಶಶಾಂಕ ಮಡಿವಾಳ ಸಹಕರಿಸಿದರು.
ರವಿ ಹಾಸ್ಯಗಾರ ಹುಕ್ಕಳಿ ಹಾಗೂ ಎಸ್.ಕೆ.ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.

