


ಸಿದ್ದಾಪುರ: ಭಾರತದ ಸ್ವಾತಂತ್ರ್ಯ ದ 75 ವರ್ಷ ಗಳ ಸವಿನೆನಪಿಗಾಗಿ ಆಜಾದಿ ಅಮ್ರತ್ ಮಹೋತ್ಸವದ ಅಂಗವಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮ ಪಟ್ಟಣ ಪಂಚಾಯತ ಸಭಾಂಗಣದಲ್ಲಿ ನಡೆಯಿತು.
ಸೇವೆಯಿಂದ ನಿವೃತ್ತರಾದ ಮಾಜಿ ಸೈನಿಕರು ಹಾಗೂ ಸ್ವಾತಂತ್ರ್ಯ ಹೋರಾಟದ ಲ್ಲಿ ಪಾಲ್ಗೊಂಡ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಮಾಜಿ ಉಪಾಧ್ಯಕ್ಷ ರವಿಕುಮಾರ್ ನಾಯ್ಕ ಮಾತನಾಡಿ ದೇಶಾಭಿಮಾನ ಬೆಳಸಿಕೊಂಡು ಸ್ವಾತಂತ್ರ್ಯ ಹೋರಾಟದ ಲ್ಲಿ ಭಾಗಿಯಾದ ಆದರ್ಶ ಗಳನ್ನು ತ್ಯಾಗಬಲಿದಾನಗಳನ್ನು ಮಾಡಿದವರ ಸ್ಮರಿಸೋಣ ಎಂದರು.
ಮಾಜಿ ಸೈನಿಕರಾದ ಸುರೇಶ ಕೆ ಯು. ಕುಮಾರ ಗೌಡ, ಮಂಜುನಾಥ ಮಡಿವಾಳ, ಮಹಾಬಲೇಶ್ವರ ನಾಯ್ಕ, ನಾಗಪ್ಪ ನಾಯ್ಕ, ಗಣಪತಿ ಟಿ ಮೇಸ್ತ, ಅಬ್ದುಲ್ ಗಫಾರ ಶೇಖ, ರಾಜೇಶ ನಾಯ್ಕ, ಡುಂಮಿಂಗ್, ರಾಮಾ ತೆಂಗಾರಬಳ್ಳಿ, ಕೃಷ್ಣ ನಾಯ್ಕ, ವೀರಭದ್ರ ಪಾಟೀಲ, ವಿನಾಯಕ ಮಡಿವಾಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಲವರನ್ನು ಸನ್ಮಾನಿಸಲಾಯಿತು.

ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರಭದ್ರ ಪಾಟೀಲ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಮೂಲಕ ದೊರಕಿದ ಸ್ವಾತಂತ್ರ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ನಮ್ಮ ದೇಶ ನಮ್ಮ ರಕ್ಷಣೆ ನಮ್ಮ ಬವಾಬ್ಧಾರಿ ಎಂದರು.
ನಂದನ ಬೋರಕರ, ಗುರುರಾಜ ಶಾನಭಾಗ ಮಾತನಾಡಿದರು.
ಅಧ್ಯಕ್ಷ ತೆ ವಹಿಸಿದ್ದ ತಹಸೀಲ್ದಾರ ಎಮ್ ಆರ್ ಕುಲಕರ್ಣಿ ಮಾತನಾಡಿದರು.

,
ಹಾಳದಕಟ್ಟಾ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ರತ್ನಾಕರ ನಾಯ್ಕ ಉಪನ್ಯಾಸ ನೀಡಿ, ಸ್ವಾತಂತ್ಯ ಹೋರಾಟದ ಕೆಚ್ಚೆದೆಯ ಊರಾದ ಸಿದ್ದಾಪುರ ಗಾಂಧೀ ಉಸಿರಾಡಿದ ನೆಲವಾಗಿದೆ. ಸಿದ್ದಾಪುರ ಐತಿಹಾಸಿಕ, ಹಲವು ವೈವಿಧ್ಯ ಹಾಗೂ ಸಂಸ್ಕೃತಿಯನ್ನು ಒಳಗೊಂಡ ಭಾರತದ ಸ್ವಾಭಿಮಾನದ ನೆಲವಾಗಿದೆ. 611 ಪುರುಷ, 170 ಮಹಿಳೆಯರು ಕರನಿರಾಕರಣೆ ಚಳುವಳಿಯಲ್ಲಿ ಭಾಗಿಯಾಗಿ ಕರ ನಿರಾಕರಿಸಿ ಸ್ವಾಭಿಮಾನ ಪಣಕ್ಕಿಟ್ಟಿದ್ದರು. ದೇಶ ನೆಲ ಜಲದ ಅರಿವು ಮಕ್ಕಳಲ್ಲಿ ಮೂಡಿಸೋಣ ಎಂದರು.
ಮುಖ್ಯಾಧಿಕಾರಿ ಐ ಜಿ ಕೊಣ್ಣೂರ, ಸದಸ್ಯರಾದ ವೆಂಕೊಬಾ, ರಾಧಿಕಾ ಕಾನಗೋಡ, ಉಪಸ್ಥಿತರಿದ್ದರು.
ರಮೇಶ ಹಾಗೂ ಲಕ್ಷ್ಮೀ ನಾಯ್ಕ ನಿರೂಪಿಸಿದರು.

