

ಸಿದ್ದಾಪುರ
ಭಾರತೀಯ ಅಂಚೆ ಇಲಾಖೆಯ ಶಿರಸಿ ವಿಭಾಗವು ಆ.೨೯ ಮತ್ತು ೩೦ರಂದು ತಾಲೂಕಿನ ಕಾನಗೋಡಿನ ಸಾಮಾನ್ಯ ಸೇವಾ ಕೇಂದ್ರದಲ್ಲಿ ಬೃಹತ್ ಆಧಾರ ತಿದ್ದುಪಡಿ ಮತ್ತು ನೋಂದಣಿ ಮೇಳವನ್ನು ಆಯೋಜಿಸಿದೆ.
ಜನ್ಮ ದಿನಾಂಕದ ಬದಲಾವಣೆ,ಹೆಸರು ಬದಲಾವಣೆ,ವಿಳಾಸ ಬದಲಾವಣೆಗಳಿಗೆ ಅಗತ್ಯವಿರುವ ದಾಖಲೆಗಳನ್ನು ತರಬೇಕು. ಮಕ್ಕಳಿಗೆ ಆಧಾರ್ ಮಾಡಿಸಲು ಜನ್ಮದಾಖಲೆ,ತಂದೆ ಮತ್ತು ತಾಯಿಯ ಆಧಾರ್ ಕಾರ್ಡ ಜೊತೆಗೆ ಮಗುವಿನೊಂದಿಗೆ ತಂದೆ,ತಾಯಿಗಳು ಬರಬೇಕು.
ಸರಕಾರದ ವಿವಿಧ ಯೋಜನೆಗಳ ನೇರ ನಗದು ವರ್ಗಾವಣೆಗಾಗಿ ಆಧಾರ್ ಸೀಡಿಂಗ್ ಹಾಗೂ ಅಂಚೆ ಖಾತೆಗಳನ್ನು ತೆರೆದುಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ೯೯೦೨೧೨೧೩೯೨,೯೪೮೧೭೭೫೬೨೨ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


