


ಸಿದ್ಧಾಪುರದ ಶಿರಳಗಿ ಭವ್ಯ ಸಾವಿಗೆ ಕಾರಣನಾದ ಪ್ರದೀಪ ಎನ್ನುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಭವ್ಯಳ ತಂದೆ ನಾಗು ಮೂಕ ಹರಿಜನ ಆಗ್ರಹಿಸಿದ್ದಾರೆ. ಸಾಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಅಮಾಯಕ ಪ್ರತಿಭಾವಂತ ಮಗಳಿಗೆ ವಿಷ ಕುಡಿಸಿದ ವ್ಯಕ್ತಿ ಜಾಮೀನು ಪಡೆದು ಆರಾಂ ಆಗಿದ್ದಾನೆ. ಮಗಳ ಮುಗ್ಧತೆ ಬಳಸಿಕೊಂಡು ಅವಳ ಸಾವಿಗೆ ಕಾರಣನಾದ ವ್ಯಕ್ತಿಯ ವಿರುದ್ಧ ಶೀಘ್ರ ಸೂಕ್ತ ಕ್ರಮ ಜರುಗಿಸಿ ತಮಗೆ ನ್ಯಾಯ ಒದಗಿಸಬೇಕೆಂದು ಅವರು ಆಗ್ರಹಿಸಿದರು.
ಸಾಗರದ ಇಂದಿರಾಗಾಂಧಿ ಕಾಲೇಜಿನಲ್ಲಿ ಬಿಎಸ್ಸಿ ಓದುತಿದ್ದ ತಮ್ಮ ಮಗಳು ಭವ್ಯ ಳಿಗೆ ಪ್ರೀತಿಸಬೇಕೆಂದು ಪುಸಲಾಯಿಸಿ ವಿಷಪ್ರಾಶನ ಮಾಡಿಸಿದ ವ್ಯಕ್ತಿ ತಮಗೂ ಹಲವು ಬಾರಿ ಕರೆಮಾಡಿ ಮಾತನಾಡಿ ಮಾಹಿತಿ ನೀಡಿದ್ದಾನೆ. ಈತನೇ ಭವ್ಯಳ ಸಾವಿಗೆ ನೇರ ಕಾರಣನಾಗಿದ್ದು ಅವನಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ತಮ್ಮ ಬಾಧಿತ ಕುಟುಂಬಕ್ಕೆ ಸಹಕರಿಸಲು ಆಡಳಿತ ವ್ಯವಸ್ಥೆಗೆ ಅವರು ಮನವಿ ಮಾಡಿದ್ದಾರೆ.
