


ಸಿದ್ದಾಪುರ
ಕಲೆ ಸಂಸ್ಕೃತಿಯ ಏಳ್ಗೆಯಲ್ಲಿ ತೊಡಗಿಕೊಂಡ ಇಲ್ಲಿನ ಅನಂತ ಯಕ್ಷ ಕಲಾ ಪ್ರತಿಷ್ಠಾನ ನಡೆಸುವ ಅನಂತೋತ್ಸವ ೨೦೨೩ ತಾಲೂಕಿನ ಹೇರೂರಿನ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ಅ. ೧ ರ ಸಂಜೆ ೫ ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ , ಭಾಗವತ ಕೇಶವ ಹೆಗಡೆ ಕೊಳಗಿ ತಿಳಿಸಿದ್ದಾರೆ.
ಸಾವಿರಕ್ಕೂ ಮಿಕ್ಕಿದ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದ ಯಕ್ಷ ಗುರು, ಹಿರಿಯ ಭಾಗವತ ಕೆ. ಪಿ. ಹೆಗಡೆ ಗೋಳಗೋಡ್ ಅವರಿಗೆ ಪ್ರತಿಷ್ಠಾನ ನೀಡುವ ಅನಂತ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕರ‍್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ. ಅಭಿನಂದನಾ ನುಡಿಯನ್ನು ವಿದ್ಯಾವಾಚಸ್ಪತಿ ಉಮಾಕಾಂತ್ ಭಟ್ ಕೆರೆಕೈ ಅವರು ಆಡಲಿದ್ದಾರೆ.
ಅತಿಥಿಗಳಾಗಿ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ಸಿದ್ದಾಪುರ ತಾಲೂಕು ಪತ್ರರ‍್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಯಕ್ಷಗಾನ ಪ್ರೇಮಿ ಆರ್.ಜಿ. ಭಟ್ ರ‍್ಗಾಸರ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ದೇವಸ್ಥಾನದ ಅಧ್ಯಕ್ಷ ನರಸಿಂಹಮೂರ್ತಿ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ. ಭಟ್ ಸಿದ್ದಾಪುರ ವಹಿಸಿಕೊಳ್ಳಲಿದ್ದಾರೆ.
ಬಳಿಕ ಇದೇ ವೇದಿಕೆಯಲ್ಲಿ ವಿಶ್ವಶಾಂತಿ ಸರಣಿಯ ಬಹು ಪ್ರಸಿದ್ಧ ರೂಪಕ ಶ್ರೀಕೃಷ್ಣಂ ವಂದೇ ಯಕ್ಷಗಾನ ನೃತ್ಯ ರೂಪಕ ಪ್ರಸ್ತುತವಾಗಲಿದೆ. ಶಿರಸಿಯ ಕು. ತುಳಸಿ ಹೆಗಡೆ ರೂಪಕವನ್ನು ಪ್ರಸ್ತುತಗೊಳಿಸಲಿದ್ದು, ಹಿನ್ನೆಲೆಯಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶಂಕರ್ ಭಾಗವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕಾರ ನೀಡಲಿದ್ದು, ಪ್ರಸಾದನವನ್ನು ವೆಂಕಟೇಶ ಬಗ್ರಿಮಕ್ಕಿ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕಪ್ರಡಾ)
