

ಕಳೆದ ವರ್ಷ ಸಿದ್ಧಾಪುರ ಕಾನಗೋಡಿನಲ್ಲಿ ನಡೆದ ಕೆರೆಭೇಟೆ ರಾದ್ಧಾಂತದ ವೇಳೆ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಮಧು ಬಂಗಾರಪ್ಪ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾನಗೋಡು ಕೆರೆಭೇಟೆ ಗಲಾಟೆ ಹಿನ್ನೆಲೆಯಲ್ಲಿ ಸೊರಬಾ,ಸಾಗರ ಸೇರಿದಂತೆ ಎರಡ್ಮೂರು ಜಿಲ್ಲೆಗಳ ಜನರ ಮೇಲೆ ಸಿದ್ಧಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು ಅವುಗಳನ್ನು ಸರ್ಕಾರ ಹಿಂಪಡೆದು ಅಮಾಯಕರಿಗೆ ನ್ಯಾಯ ಒದಗಿಸಬೇಕೆಂದು ಗೃಹ ಸಚಿವ ಪರಮೇಶ್ವರ್ ರಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.
