


ಸಿದ್ದಾಪುರ
ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಯಕ್ಷಾಭ್ಯುದಯ ಬಳಗ ಇಟಗಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಹಾಗೂ ಯಕ್ಷಗಾನ ಅಭಿಮಾನಿಗಳ ಮತ್ತು ಸಂಸ್ಕೃತಿ ಸಂಪದ ಶೃಂಗೇರಿ ಶಂಕರ ಮಠ ಸಿದ್ದಾಪುರ ಸಹಕಾರದೊಂದಿಗೆ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ ದಿಂದ ಪ್ರದರ್ಶನಗೊಂಡ ಸುದರ್ಶನ ವಿಜಯ-ಚಂದ್ರಾವಳಿ ವಿಲಾಸ ಯಕ್ಷಗಾನ ಮೆಚ್ಚುಗೆಗಳಿಸಿತು.
ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಭಾಗವತಿಕೆಗೆ ಸುನೀಲ್ ಭಂಡಾರಿ ಕಡತೋಕಾ ಮದ್ದಳೆಯಲ್ಲಿ ಹಾಗೂ ಪ್ರಜ್ವಲ್ ಮುಂಡಾಡಿ ಚಂಡೆಯಲ್ಲಿ ಉತ್ತಮ ಸಾಥ ನೀಡಿದರು.
ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ವಿನಯ ಭಟ್ಟ ಬೇರೊಳ್ಳಿ, ಕಾರ್ತಿಕ ಚಿಟ್ಟಾಣಿ, ಅಣ್ಣಪ್ಪ ಗೌಡ ಮಾಗೋಡು, ನಾಗರಾಜ ಕುಂಕಿಪಾಲ, ರವೀಂದ್ರ ದೇವಾಡಿಗ, ಪುರಂಧರ ಮೂಡ್ಕಣಿ, ದರ್ಶನ ಭಟ್ಟ ವಿವಿಧ ಪಾತ್ರ ನಿರ್ವಹಿಸಿದರು.
