



ಸಿದ್ದಾಪುರ
ಭಟ್ಕಳದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ಶ್ರೀರಾಮ ಶಶಿಧರ ಹೆಗಡೆ ಹುಕ್ಲಮಕ್ಕಿ ಶಿರಸಿ ಶೈಕ್ಷಣಿಕ ಜಿಲ್ಲಾತಂಡದಿಂದ ರಾಜ್ಯಮಟ್ಟದ ವಾಲಿಬಾಲ್ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಶ್ರೀಮಧ್ಭಾಗವತ ಉಪನ್ಯಾಸ ಮಾಲಿಕೆ
ಸಿದ್ದಾಪುರ
ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಸಂಸ್ಕೃತಿ ಸಂಪದ ಶೃಂಗೇರಿ ಶಂಕರ ಮಠ ಸಿದ್ದಾಪುರ ಆಶ್ರಯದಲ್ಲಿ ಸಾಕೇತ ಪ್ರತಿಷ್ಠಾನ ಗುಂಜಗೋಡು ಹಾಗೂ ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲಾರೆಮನೆ ಇವರ ಸಹಕಾರದಲ್ಲಿ ಸೆ.೨೦ರಿಂದ ೨೬ವರೆಗೆ ನಿತ್ಯ ಸಂಜೆ ೬.೩೦ರಿಂದ ೮ಗಂಟೆಯವರೆಗೆ ಡಾ.ವೀಣಾ ಬನ್ನಂಜೆ ಅವರಿಂದ ಶ್ರೀಮಧ್ಭಾಗವತ ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದೆ ಎಂದು ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ತಿಳಿಸಿದ್ದಾರೆ.
