

ಸಿದ್ದಾಪುರ: ತಾಲೂಕಿನ ಇಟಗಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಇಟಗಿಯ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ರಮೇಶ ಸುಬ್ರಾಯ ಹೆಗಡೆ ಕೊಡ್ತಗಣಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು.
ಈ ಸಂದರ್ಭದಲ್ಲಿ ಸಂಘದ ಮೂಲಕ ಹೆಚ್ಚಿನ ಅಡಕೆ ವಿಕ್ರಿ ಮಾಡಿ ಉತ್ತಮ ವ್ಯವಹಾರ ಮಾಡಿದ ವಿರೇಂದ್ರ ಕೆರೆಸ್ವಾಮಿ ಗೌಡರ್ ಬೈಲಳ್ಳಿ ಹಾಗೂ ರಾಮ ಕನ್ನ ಗೌಡ ಹರ್ಗಿ ಇವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಮಹಾಬಲೇಶ್ವರ ಬೀರಾ ನಾಯ್ಕ ಕಾನಳ್ಳಿ ಹಾಗೂ ಆಡಳಿತ ಮಂಡಳಿಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.


ಸಂಘದ ಮುಖ್ಯಕಾರ್ಯನಿರ್ವಾಹಕ ಎಂ.ಜಿ.ಹೆಗಡೆ ವಾರ್ಷಿಕ ವರದಿ ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ನಾರಾಯಣ ಮೂರ್ತಿ ಹೆಗಡೆ ಹರ್ಗಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸಿದ್ದಾಪುರ:ರಾಷ್ಟಿçಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪಶುಸಂಗೋಪನಾ ಇಲಾಖೆಯಿಂದ ತಾಲೂಕಿನಾದ್ಯಂತ ಸೆ.೨೬ರಿಂದ ಅಕ್ಟೋಬರ್ ೨೫ರವರೆಗೆ ಕಾಲು ಮತ್ತು ಬಾಯಿ ರೋಗದ ವಿರುದ್ದ ಮುಂಜಾಗೃತೆಯಾಗಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.

ತಾಲೂಕಿನಲ್ಲಿ ೪೦೬೧೫ ಜಾನುವಾರುಗಳಿದ್ದು ೧೮ ಲಸಿಕಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ತಾಲೂಕಿನ ರೈತರ ಮನೆಗಳಿಗೆ ಲಸಿಕಾ ಸಿಬ್ಬಂದಿಗಳು ಆಗಮಿಸಿದಾಗ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಸಹಕರಿಸುವಂತೆ ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
