

ಸಿದ್ದಾಪುರ
ತಾಲೂಕಿನ ನಿಡಗೋಡ ಹಾಲು ಉತ್ಪಾದಕ ಸಹಕಾರಿ ಸಂಘ ಹಾಗೂ ಬಿಎಂಸಿ ಕೇಂದ್ರದ ೨೦೨೨-೨೩ನೇ ಸಾಲಿನಲ್ಲಿ ೨ಲಕ್ಷದ ೪೮ಸಾವಿರದ ೯೧೨ರೂಗಳಷ್ಟು ನಿಕ್ಕಿ ಲಾಭ ಹೊಂದಿದೆ ಎಂದು ಸಂಘದ ಅಧ್ಯಕ್ಷ ಕೆ.ಪಿ.ಗೌಡರ್ ಹೂಕಾರ ತಿಳಿಸಿದರು.
ನಿಡಗೋಡಿನ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಶನಿವಾರ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಘವು ಸದಸ್ಯರಿಗೆ ೨೦೧೪-೧೫ನೇ ಸಾಲಿನ ೧ಲಕ್ಷದ ೩ಸಾವಿರದ ೪೨೬ರೂಗಳ ಬೋನಸ್‌ನ್ನು ವಿತರಿಸಲಾಯಿತು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ, ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ಕೆ,
ಇದೇ ಸಂದರ್ಭದಲ್ಲಿ ನಿಡಗೋಡ ಬಿಎಂಸಿಗೆ ಉತ್ತಮ ಗುಣಮಟ್ಟದ ಹಾಲನ್ನು ನೀಡಿದ ಕೋಡ್ಸರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸತೀಶ ಹೆಗಡೆ ಹಾಗೂ ಮುಖ್ಯಕಾರ್ಯನಿರ್ವಾಹಕಿ ವಸುಧಾ ವಿ.ಹೆಗಡೆ ಅವರಿಗೆ ವಾಟರ್ ಪಿಲ್ಟರ್ ನೀಡಿ ಗೌರವಿಸಲಾಯಿತು. ನಿವೃತ್ತ ಶಿರಸ್ತೆದಾರರಾದ ಎನ್.ಐ. ಗೌಡ ಅವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯಕಾರ್ಯನಿರ್ವಾಹಕ ವೆಂಕಟೇಶ ಬಿ.ನಾಯ್ಕ ವಾರ್ಷಿಕ ವರದಿ ವಾಚಿಸಿದರು.
ಉಪಾಧ್ಯಕ್ಷ ಸುರೇಶ ಟಿ.ನಾಯ್ಕ, ನಿರ್ದೇಶಕರಾದ ಲಕ್ಷಿö್ಮನಾರಾಯಣ ಹೆಗಡೆ, ಷಣ್ಮುಖ ಎಸ್. ಗೌಡರ್, ಕಾಳ ಟಿ. ನಾಯ್ಕ, ರಾಮ ಜಿ.ನಾಯ್ಕ, ಗೌರಿ ಕೃಷ್ಣ ನಾಯ್ಕ, ಮಹೇಶ ಎಸ್. ಗೌಡರ್, ಮಹಾಬಲೇಶ್ವರ ವಿ.ಹೆಗಡೆ ಇತರರಿದರು.ಸಂಘದ ಸಿಬ್ಬಂದಿಗಳು ಸಹಕರಿಸಿದರು.

-ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ ೪೧ನೇ ವರ್ಷದ ಗಣೇಶೋತ್ಸವ ಶನಿವಾರ ಸಂಪನ್ನಗೊಂಡಿದ್ದು ಶೃಂಗರಿಸಿದ ವಾಹನದಲ್ಲಿ ಗಣೇಶ ಮೂರ್ತಿಯನ್ನು ಕೂಡ್ರಿಸಿ ಸಂಭ್ರಮದಿಂದ ಭಕ್ತರು ಮೆರವಣಿಗೆಯಲ್ಲಿ ಸಾಗಿ ಮಲ್ಕಾರ-ಕಂಚಿಮನೆ ಹೊಳೆಯಲ್ಲಿ ವಿಸರ್ಜಿಸಿದರು.


–
ಸಿದ್ದಾಪುರ
ತಾಲೂಕಿನ ಗಾಳೀಜಡ್ಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಪ್ರಯುಕ್ತ ಊರ ನಾಗರಿಕರ ಸಹಕಾರದೊಂದಿಗೆ ಗಾಳೀಜಡ್ಡಿ ಸಹಿಪ್ರಾ ಶಾಲೆಯ ಉಮಾಪತಿ ಹೆಗಡೆ ರಂಗಮAದಿರದಲ್ಲಿ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಸೆ.೨೭ರಂದು ರಾತ್ರಿ ೮.೪೫ರಿಂದ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸತೀಶ ಹೆಗಡೆ ದಂಟಕಲ್, ಅನಿರುದ್ಧ ಹೆಗಡೆ ವರ್ಗಾಸರ, ಪ್ರಸನ್ನ ಹೆಗ್ಗಾರ ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ, ಕಾರ್ತಿಕ ಚಿಟ್ಟಾಣಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ವಿನಯ ಬೇರೊಳ್ಳಿ, ಮಹಾಬಲೇಶ್ವರ ಗೌಡ ಪಾತ್ರ ನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
