

ಕಾಡು ಪ್ರಾಣಿಗಳು ನಾಡಿಗೆ ಬರುವುದು ಅಪರೂಪವೇನಲ್ಲ. ಆದರೆ ಇಂದು ಮುಂಜಾನೆ ೮ರಿಂದ ೯ ರ ನಡುವೆ ಶಿರಸಿ-ಸಿದ್ಧಾಪುರ ರಸ್ತೆಯ ಕಾಳೇನಳ್ಳಿ (ನಾಣಿಕಟ್ಟಾ) ಬಳಿ ಕಂಡ ಕಾಡೆಮ್ಮೆ ತನ್ನ ನಡವಳಿಕೆಯಿಂದ ಆಶ್ಚರ್ಯ ಮೂಡಿಸಿದೆ.

https://samajamukhi.net/wp-admin/post.php?post=19377&action=edit


ಶಿರಸಿ-ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಕಾಡುಹಂದಿ,ಕಾಡೆಮ್ಮೆ,ಜಿಂಕೆಗಳು ಕಾಣಸಿಗುತ್ತವೆ. ಆದರೆ ಈ ಕಾಡುಕೋಣ,ಕಾಡುಕೋಣಗಳಷ್ಟು ಆರಾಂ ಆಗಿ ಓಡಾಡುವ ವನ್ಯಮೃಗಗಳು ಕಾಣಸಿಗುವುದು ಅಪರೂಪ. ಇಂದು ಬೆಳಿಗ್ಗೆ ಕಾಳೇನಳ್ಳಿ ಬಳಿ ಪ್ರತ್ಯಕ್ಷವಾದ ಈ ಕಾಡುಕೋಣ ನಿರ್ಭಯದಿಂದ ಓಡಾಡಿದ್ದಷ್ಟೇ ಅಲ್ಲದೆ ಸ್ಥಳೀಯರು ನಾಡ ಎಮ್ಮೆಗಳಿಗೆ ಕರೆದಂತೆ ಆ..ಯ್ಕ್ ಎಂದು ಕರೆಯುತ್ತಲೇ ತಿರುಗಿ ನೋಡಿ ಕೆಲವು ಸಮಯ ನಿಂತಂತೆ ಮಾಡಿ ಕಾಡು ಪ್ರವೇಶಿಸಿತು. ಈ ಅಪರೂಪದ ಸನ್ನಿವೇಶದ ಫೋಟೋ, ವಿಡಿಯೋಗಳನ್ನು ತೆಗೆದು ನೀಡಿದವರು ಉಮೇಶ್ ನಾಯ್ಕ ಬಿಳ್ಳುಮನೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
