

ವ್ಯವಸಾಯ ಸೇವಾ ಸಹಕಾರಿ ಸಂಘ ಲಂಬಾಪುರ ದ 64 ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಎಮ್.ಐ ನಾಯ್ಕ್ ಕೆಳಗಿನಸಸಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಗೆ ವಿಶೇಷ ಆಮಂತ್ರಿತರಾಗಿ ಟಿ.ಎಮ್.ಎಸ್ ಅಧ್ಯಕ್ಷ ಆರ್.ಎಮ್ ಹೆಗಡೆ ಬಾಳೇಸರ ಹಾಗೂ ದಿ.ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ರಿ ಬಿಳಗಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ 2022-23 ರಲ್ಲಿ ಲಂಬಾಪುರ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಶೇ 85 ಕ್ಕಿಂತ ಹೆಚ್ಚು ಅಂಕ ಗಳಿಸಿದ 3 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು ಮತ್ತು ಸತ್ಯಸಾಯಿ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಯ ಕನ್ನಡ ವಿಭಾಗದಲ್ಲಿ ಬಂಗಾರ ಪದಕವನ್ನು ಮಾನ್ಯ ರಾಷ್ಟ್ರಪತಿಗಳಿಂದ ಪಡೆದ ವಿದ್ಯಾ ಅಣ್ಣಪ್ಪ ನಾಯ್ಕ್ ಸುತ್ತಲಮನೆ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಂಗಾರದ ಪದಕವನ್ನು ಉಪರಾಷ್ಟ್ರಪತಿಗಳಿಂದ ಪಡೆದ ಗುರುಪ್ರಸಾದ ಶ್ರೀಧರ ಹೆಗಡೆ ಸುಂಗೋಳಿಮನೆ ಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಘದ ಆಡಳಿತ ಕಮೀಟಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಸಂಘವು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲಾಭ ಗಳಿಸುತ್ತ ಬಂದಿದ್ದು 2022-23 ನೇ ಸಾಲಿನಲ್ಲಿ ರೂ 3484857.85 ಲಾಭ ಗಳಿಸಿರುವುದರ ಜೊತೆಗೆ ದಿ.ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿ ನೀಡುವ ಸಿದ್ದಾಪುರ ತಾಲೂಕಿನ ಉತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಲಂಬಾಪುರ ಸೇವಾ ಸಹಕಾರಿ ಸಂಘವು ಈ ಬಾರಿ ಆಯ್ಕೆ ಆಗಿದೆ ಎಂದು ಸಭೆಯಲ್ಲಿ ರಾಘವೇಂದ್ರ ಶಾಸ್ತ್ರಿ ಯವರು ಘೋಷಣೆ ಮಾಡಿದರು. ಸಭೆಯಲ್ಲಿ ಸಂಘದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು. ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಎಮ್ ಎನ್ ಹೆಗಡೆ ತಲೆಕೇರಿ ಸ್ವಾಗತ ಭಾಷಣ,ಅಧ್ಯಕ್ಷರಾದ ಎಮ್ ಆಯ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನು,ಮುಖ್ಯಕಾರ್ಯನಿರ್ವಾಹಕರಾದ ಬಿ.ಜಿ.ಭಟ್ ಕಾರ್ಯಕ್ರಮ ನಿರ್ವಹಣೆ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಗಣಪತಿ ಗೋವಿಂದ ನಾಯ್ಕ್ ವಂದನಾರ್ಪಣೆ ಮಾಡಿದರು.
