


ಸಿದ್ದಾಪುರ
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆ ಶಿರಸಿ ವಿಭಾಗ ದಿಂದ ಸೆ.೨೯ ಹಾಗೂ ೩೦ರಂದು ಬೃಹತ್ ಆಧಾರ ತಿದ್ದುಪಡಿ/ನೋಂದಣಿ ಮೇಳ ನಡೆಯಲಿದೆ.
ಈ ಮೇಳದಲ್ಲಿ ಜನ್ಮ ದಿನಾಂಕ ಬದಲಾವಣೆ, ಹೆಸರು ಬದಲಾವಣೆ, ವಿಳಾಸ ಬದಲಾವಣೆ,ಮಕ್ಕಳಿಗೆ ಆಧಾರ್ ಕಾರ್ಡ ಮಾಡಲಾಗುತ್ತದೆ.
ಮಹಾದೇವಿ ರಾಮ ಗೌಡ
ಸಿದ್ದಾಪುರ:ತಾಲೂಕಿನ ಇಟಗಿ ಸಮೀಪದ ಹರಗಿ ಗದ್ದೆಮನೆ ನಿವಾಸಿ ಮಹಾದೇವಿ ರಾಮ ಗೌಡ(೭೫) ಬುಧವಾರ ನಿಧನಹೊಂದಿದರು.
ಹೇರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಕೌಂಟೆಂಟ್ ವೆಂಕಟೇಶ ರಾಮ ಗೌಡ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
