



ಕಾವೇರಿ ನೀರಿನ ವಿಚಾರದ ಕರ್ನಾಟಕ ಬಂದ್ ಗೆ ಇಂದು ನೀರಸ ಪ್ರತಿಕ್ರೀಯೆ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಭಾಗಶ: ಯಶಸ್ವಿಯಾಗಿದ್ದು ಹಳೆ ಮೈಸೂರು ಕರ್ನಾಟಕ ಬಿಟ್ಟರೆ ಇತರ ಪ್ರದೇಶಗಳಲ್ಲಿ ಬಂದ್ ವಿಫಲವಾಗಿದೆ.
ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್ ವಿಫಲವಾಗಿದೆ. ಆದರೆ ಬಹುತೇಕ ತಾಲೂಕುಗಳಲ್ಲಿ ಕನ್ನಡ ಪರ ಸಂಘಟನೆಗಳು ಮೆರವಣಿಗೆ ಮಾಡಿ, ಮನವಿ ಸಲ್ಲಿಸುವ ಮೂಲಕ ತಮ್ಮ ಅಸ್ಥಿತ್ವ ಸಾಬೀತು ಮಾಡಿವೆ.
ಸಿದ್ಧಾಪುರದಲ್ಲಿ ನಾಡದೇವಿ ಹೋರಾಟ ಸಮೀತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದು ಈ ಪ್ರತಿಭಟನೆ, ಮನವಿ ಅರ್ಪಣೆ ವೇಳೆ ಅನೇಕ ಸಂಘಟನೆಗಳು ಭಾಗವಹಿಸಿದ್ದವು.
ಕರವೇ ಜನಧ್ವನಿ ಘಟಕ ಬಂದ್ ಬೆಂಬಲಿಸಿ ನಗರದಲ್ಲಿ ಮೆರವಣಿಗೆ ನಡೆಸಿ,ತಮಿಳುನಾಡಿನ ಪ್ರತಿಕೃತಿ ದಹಿಸಿತು. ತಹಸಿಲ್ಧಾರರ ಮೂಲಕ ರಾಜ್ಯಪಾಲರು ಮತ್ತು ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿತು.
