


ಉತ್ತರ ಕನ್ನಡ ಜಿಲ್ಲೆಯ ಚಿಕ್ಕ ನಗರ ಸಿದ್ಧಾಪುರದ ಅನೇಕ ವಿಚಾರಗಳು ಹೈಕೋರ್ಟ್ ಮೆಟ್ಟಿಲೇರುತ್ತಿವೆ. ಅಧ್ಯಕ್ಷ,ಉಪಾಧ್ಯಕ್ಷರ ಮೀಸಲಾತಿ ವಿಚಾರ, ಗೂಡಂಗಡಿ ತೆರವು ಸೇರಿದಂತೆ ಅನೇಕ ವಿಚಾರಗಳು ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿವೆ. ಸಿದ್ಧಾಪುರದಲ್ಲಿ ಹಿಂದೆ ಮೌನಿಶ್ ಮುದಗಿಲ್ ಜಿಲ್ಲಾಧಿಕಾರಿಗಳಾಗಿದ್ದಾಗ ಗೂಡಂಗಡಿಗಳನ್ನು ತೆರವು ಗೊಳಿಸಿ ನಗರದ ಸೌಂದರ್ಯ ಕಾಪಾಡಲಾಗಿತ್ತು. ಈಗ ನಗರದ ಹಳೆ ಬಸ್ ನಿಲ್ಧಾಣದ ಎದುರು ಚಪ್ಪಲಿ ರಿಪೇರಿ ಮಾಡುವ ಎರಡು ಗೂಡಂಗಡಿಗಳ ವಿಚಾರದಲ್ಲಿ ವಿವಾದವಾಗಿ ಅದು ಆಡಳಿತ ಪಕ್ಷ ಮತ್ತು ಪ.ಪಂ. ಆಡಳಿತ ಸಮೀತಿ ನಡುವೆ ತೊಳಲಾಟಕ್ಕೆ ಕಾರಣವಾಗಿತ್ತು. ಈಗ ಇದೇ ವಿಚಾರವಾಗಿ ಹೈಕೋರ್ಟ್ ಅಂಗಳಕ್ಕೆ ಈ ವಿಷಯ ಬಂದು ನಿಂತಿದೆ. ನಗರದಲ್ಲಿ ಗೂಡಂಗಡಿಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸಬಾರದು ಎಂದು ಆದೇಶ ಮಾಡಿಸಲು ಹೈಕೋರ್ಟ್ ಮೊರೆ ಹೋಗಿರುವ ಪ.ಪಂ. ಆಡಳಿತ ನಗರದಲ್ಲಿ ದಿಢೀರನೇ ಸ್ಥಾಪನೆಯಾಗಿದ್ದ ಎರಡು ಚಪ್ಪಲಿ ಅಂಗಡಿಗಳನ್ನು ತೆರವು ಮಾಡಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದ ವಿಡಿಯೋಗಳು ಇಲ್ಲಿವೆ.

