

ಮುಖ್ಯಂಶಗಳು-
* ಮಾಹಿತಿ ಇಲ್ಲದೆ ಸಭೆಗೆ ಬರಬೇಡಿ
- ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಭೀಮಣ್ಣ ಗರಂ
- ವೈನ್ ಶಾಪ್ ಗಳಲ್ಲಿ ಎಂ.ಆರ್.ಪಿ.ಗಿಂತ ಹೆಚ್ಚು ಬೆಲೆ ಕೊಡಬೇಡಿ
- ಅಕ್ರಮ ಸಾರಾಯಿ ಮಾರಾಟ ಮಾಡುವವರ ಮೇಲೆ ಹೆಚ್ಚು ದಂಡ ವಿಧಿಸಿ
- ಶಿಕ್ಷಕರ ಸಂಘದ ಅಧ್ಯಕ್ಷ ಶಾಲೆಗೆ ಹೋಗದೆ ಅನ್ಯ ಕೆಲಸ ಮಾಡುವುದೇಕೆ?
- *
-
-
ಸರ್ಕಾರಿ ಆಸ್ಫತ್ರೆಯಲ್ಲಿ ಲಂಚಾವತಾರ

ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.ಉಪಸ್ಥಿತರಿದ್ದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತಾಲೂಕಾ ಆಸ್ಫತ್ರೆಯ ವೈದ್ಯಾಧಿಕಾರಿ ಡಾ.ಪುರಾಣಿಕ್ ಮಾಹಿತಿ ನೀಡುತ್ತಲೇ ಅವಕಾಶ ಕೋರಿ ಮಾತನಾಡಿದ ತಾ.ಪಂ. ಮಾಜಿ ಸದಸ್ಯ ವಸಂತ ನಾಯ್ಕ ತಾಲೂಕಾ ಆಸ್ಫತ್ರೆಯಲ್ಲಿ ಡಾ. ಲೋಕೇಶ್ ನಾಯ್ಕ ಮತ್ತು ವೈದ್ಯಾಧಿಕಾರಿ ಪ್ರಕಾಶ ಪುರಾಣಿಕ್ ಬಿಟ್ಟರೆ ಕೆಲವರು ಸರಿಯಾಗಿ ಕೆಲಸಮಾಡುವುದಿಲ್ಲ ಚಿಕ್ಕಪುಟ್ಟದಕ್ಕೂ ಶಿವಮೊಗ್ಗ, ಮಂಗಳೂರಿಗೆ ಸಾಗಹಾಕುವುದು ನಿಂತಿಲ್ಲ, ಹೆರಿಗೆ ವಿಭಾಗದಲ್ಲಿ ಲಂಚ ಇಲ್ಲದೆ ಕೆಲಸ ಆಗುವುದಿಲ್ಲ ಈ ಅವ್ಯವಸ್ಥೆ ಸರಿಪಡಿಸದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.
ಯಾವುದೇ ಆರೋಪಕ್ಕೆ ಲಿಖಿತ ದೂರು ನೀಡಿದರೆ ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಪುರಾಣಿಕ್ ಉತ್ತರ ನೀಡಿದರು.
ಅರಣ್ಯ ಇಲಾಖೆಯಲ್ಲಿ ಮೂರು ಜನ ಕಿರಿಯ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುತ್ತಾರೆ ಎಂದು ವಸಂತ್ ನಾಯ್ಕ ವಿವರಿಸುತ್ತಲೇ ಕೆಂಡಾಮಂಡಲರಾದ ಶಾಸಕ ಭೀಮಣ್ಣ ನಾಯ್ಕ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಬಿಸಿ ಮುಟ್ಟಿಸಿದರು.
ಅಕ್ರಮಮದ್ಯ ಮಾರಾಟ ತಡೆಯುತ್ತಿಲ್ಲ ಮತ್ತು ಸಾರಾಯಿ ಸ್ಯಾಚೆಟ್ ಮತ್ತು ಬಾಟಲಿಗಳಿಗೆ ಮುದ್ರಿತ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ವಸೂಲಿಮಾಡುತ್ತಾರೆ ಎಂದು ಸಾರ್ವಜನಿಕರು ಹೇಳುತ್ತಲೇ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಿದ ಬಗ್ಗೆ ವಿವರಿಸಿದರು.
ಶಿಕ್ಷಕರ ಸಂಘದ ಅಧ್ಯಕ್ಷರು ಸರಿಯಾಗಿ ಶಾಲೆಗೆ ಹೋಗುತಿಲ್ಲ, ಉಸ್ತುವಾರಿ ಸಚಿವರ ಕಾರ್ಯಕ್ರಮದ ಚಿತ್ರ ಕ್ರಾಪ್ ಮಾಡಿ ಪ್ರಚಾರ ಪಡೆದುಕೊಳ್ಳುತ್ತಾರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಸಾರ್ವಜನಿಕರು ಅಹವಾಲು ಹೇಳಿದಾಗ. ಬಿ.ಇ.ಓ.
ಜಿ.ಆಯ್.ನಾಯ್ಕ ರಿಗೆ ಕ್ರಮ ಜರುಗಿಸಲು ಆದೇಶಿಸಿದರು.
ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದ ಅಧಿಕಾರಿಯೊಬ್ಬರಿಗೆ ತಿವಿದ ಶಾಸಕ ಭೀಮಣ್ಣ ಇಂಥವರು ಸಭೆಗೆ ಬರಲೇಬೇಡಿ ಎಂದು ಎಚ್ಚರಿಸಿದರು.

