




ಸಿದ್ದಾಪುರ: ಮಲೆನಾಡಿನ ಗಾನಕೋಗಿಲೆ ಎಂದು ಪ್ರಸಿದ್ಧರಾಗಿ ಇತ್ತೀಚೆಗೆ ನಿಧನರಾದ ರಾಮಚಂದ್ರ ನಾಯ್ಕ ಭಾಗವತರಿಗೆ ತಾಳಮದ್ದಳೆ ಮೂಲಕ ಸ್ವಗ್ರಾಮ ಸೋವಿನಕೊಪ್ಪದಲ್ಲಿ ಮಂಗಳವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಶ್ರೀರಾಮ ನಿರ್ಯಾಣ ಪ್ರಸಂಗ ನಡೆಸಲಾಯಿತು ಹಿಮ್ಮೇಳದಲ್ಲಿ ಭಾಗವತರಾಗಿ ಮಾಧವ ಭಟ್ ಕೊಳಗಿ, ಭಾರ್ಗವ್ ಮುಂಡಿಗೆಸರ, ಮದ್ದಳೆ ವಾದಕರಾಗಿ ಹನುಮಂತ ಗೌಡ ಕಸಿಗೆ, ಮಂಜುನಾಥ್ ಗುಡ್ಡೇದಿಂಬ, ಪದ್ಮರಾಜ್ ಜೈನ್,, ಚಂಡೆ ವಾದಕರಾಗಿ ವಿಘ್ನೇಶ್ವರ್ ಗೌಡ ಕೆಸರುಕೊಪ್ಪ ,ಧನಂಜಯ್ ಪುರದಮಠ, ಅರ್ಥದಾರಿಗಳಾಗಿ ಗಣಪತಿ ಹೆಗಡೆ ಗುಂಜಗೂಡು( ಶ್ರೀರಾಮ),ಎಂ ಕೆ ನಾಯ್ಕ ಹೊಸಳ್ಳಿ (ಲಕ್ಷ್ಮಣ) ಚಂದ್ರಶೇಖರ್ ಶೆಟ್ಟಿ (ಕಾಲಪುರುಷ) ಕೃಷ್ಣ ಯಾಜಿ ಬೇಡ್ಕಣಿ (ದುರ್ವಾಸ ),-ಚಂದ್ರಶೇಖರ್ ಶೆಟ್ಟಿ ಕಾಳೇನಳ್ಳಿ(ದೇವೆಂದ್ರ) ಶ್ರೀ ಕಾಂತ ಹೆಗ್ಗೋಡು, ಬಾಗವಹಿಸಿದ್ದರು.
ರಾಮಚಂದ್ರ ಭಾಗವತ ಆತ್ಮಕ್ಕೆ ಶಾಂತಿ ಸಿಗುವ ಸಲುವಾಗಿ ಈ ತಾಳಮದ್ದಲೆ ಏರ್ಪಡಿಸಲಾಗಿತ್ತು ಇದಕ್ಕೂ ಪೂರ್ವದಲ್ಲಿ ರಾಮಚಂದ್ರ ಭಾಗವತ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಿ ಆರ್ ನಾಯ್ಕ ಹೆಗ್ಗಾರಕೈ, , ದಿವಾಕರ್ ನಾಯ್ಕ, ಕೃಷ್ಣ ಜಿ, ಉಪೇಂದ್ರ ಪೈ ಎಂ ಕೆ ನಾಯ್ಕ ಹೊಸಳ್ಳಿ ನುಡಿನ ಮನ ಸಲ್ಲಿಸಿದರು.
ಉಪನ್ಯಾಸಕ ರತ್ನಾಕರ್ ಜಿ ನಾಯ್ಕ, ಕಾರ್ಯಕ್ರಮ ನಿರೂಪಿಸಿದರು.
ಅವರ ಅಪಾರ ಅಭಿಮಾನಿಗಳು ಸಂಬಂಧಿಕರು ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
