

ಕಳೆದ ಕೆಲವು ದಶಕಗಳಿಂದ ಅರಣ್ಯ ಅತಿಕ್ರಮಣದಾರರ ಪರವಾಗಿ ಕೆಲಸಮಾಡಿ ಚಳವಳಿ ರೂಪಿಸಿದ ಎ. ರವೀಂದ್ರ ಈ ಬಾರಿ ಕಾಂಗ್ರೆಸ್ ನ ಲೋಕಸಭೆಯ ಅಭ್ಯರ್ಥಿಯಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆಯ ಪ್ರಮುಖರು ಇಂದು ಈ ಒತ್ತಾಯ ಮಾಡಿದರು.
ರವೀಂದ್ರ ನಾಯ್ಕ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಒದಗಿಸಬಹುದೆಂಬ ನಂಬಿಕೆ ನಮಗಿದೆ. ಅವರು ಕಾಂಗ್ರೆಸ್ ನ ಪ್ರಮುಖ ನಾಯಕರಾಗಿದ್ದು ಅವರು ಲೋಕಸಭೆಯಲ್ಲಿದ್ದರೆ ಜಿಲ್ಲೆಗೆ ನ್ಯಾಯ ಸಿಗಲಿದೆ ಎಂದರು.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ರವೀಂದ್ರ ಅವಕಾಶ ಕೇಳಿದ್ದರು. ಪಕ್ಷದ ತೀರ್ಮಾನ ಮನ್ನಿಸಿ ನಾವೆಲ್ಲಾ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೇವೆ. ಈಗ ಅವರಿಗೆ ಅವಕಾಶ ನೀಡಿದರೆ ಅವರನ್ನು ಲೋಕಸಭೆಗೆ ಕಳುಹಿಸಲು ನಾವೆಲ್ಲಾ ಒಗ್ಗಟ್ಟಿನಿಂದ ದುಡಿಯಲು ಸಿದ್ಧ ಎಂದರು.
