ಕಾವ್ಯವೆಂದರೆ ಒರಸಿ ಸೋಸಿದ ಚಿತ್ರ… ಕಾವ್ಯವೆಂದರೆ…ಕಿತ್ತು,ಒರೆಸಿ ತಿಂದು ಗಂಧ ಮಾಡುವ ವಿಚಿತ್ರ. ಕಾವ್ಯ ಕವಿತೆಗಳೆಂದರೆ ಸುಮ್ಮನೆ ಅಲ್ಲ ಅದು ಬೆವರೆಂದರೂ ಪಾಪ ಯಾಕೆಂದರೆ ಸುರಿಸುವ ರಕ್ತ! ಇಂಥ ಅನುಭವಗಳನ್ನೇ ಬರೆದು ಗುರಿಯಾದವರು,ಗರಿಯಾದವರು ಈ ಗೌಡರು.
ಬಂಡಾಯವೆಂದರೆ ಬಂಡಾಯ, ಸ್ನೇಹವೆಂದರೆ ಮಧುರ ಸ್ನೇಹ ಎಲ್ಲದಕ್ಕೂ ಒಗ್ಗುವ ಕವಿ ಕೆ.ಬಿ. ವೀರಲಿಂಗನಗೌಡ ಈ ಕಾಲದ ಗಟ್ಟಿಕಾಳಿನ ಕಾವ್ಯಕ್ಕೆ ಹೊಸ ಹೆಸರು ಅವರ ಕವಿತೆಗಳೇ ಅವರ ಸ್ಪಷ್ಟತೆ, ಬದ್ಧತೆ,ಬದುಕಿನ ಕನ್ನಡಿ. ಉರಿವ ವರ್ತಮಾನಕ್ಕೆ ಬೇಡವಾದ ಈ ಕವಿ ಎಲ್ಲಾ ಕಾಲಕ್ಕೂ ಬೇಕಾಗುವ ಸಾಹಿತಿ.
ವೃತ್ತಿಯಿಂದ ಶಿಕ್ಷಕರು,ಪ್ರವೃತ್ತಿಯಿಂದ ಕಲಾವಿದರು,ಸಾಹಿತಿ,ಕವಿ. ದೇವರನ್ನು ಪೂಜಿಸುವ ಅರ್ಚಕರ ಹಿನ್ನೆಲೆಯ ಬದಾಮಿಯ ಈ ಹುಳಿಮಾವು ಬಂಡಾಯದ ಜ್ಯೋತಿ!