

ಸಿದ್ಧಾಪುರ,ಅ.೭- ಎಲೆಚುಕ್ಕೆ ರೋಗ ಸೇರಿದಂತೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಸಚಿವರನ್ನು ಭೇಟಿಮಾಡುವುದರಿಂದ ಏನಾದರೂ ಪ್ರಯೋಜನವಿದೆಯೆ ಎಂದು ಪ್ರಶ್ನಿಸಿರುವ ಬಿ.ಜೆ.ಪಿ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರಕ್ಕೆ ಆಗ್ರಹಿಸಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಎಲೆಚುಕ್ಕೆ ರೋಗಕ್ಕೆ ತಕ್ಷಣ ಸ್ಫಂದನೆ ಸಿಕ್ಕಿತ್ತು ಈ ಸರ್ಕಾರಕ್ಕೆ ರೈತರ ಪರ ಕಾಳಜಿ ಇಲ್ಲ,ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ.ರಸ್ತೆ ದುರಸ್ತಿ ಮಾಡಲಾಗದಿದ್ದರೆ ಹೊಂಡ ಇದೆ ಎಚ್ಚರಿಕೆ ಎನ್ನುವ ಫಲಕ ಅಳವಡಿಸಿ ಜನರ ಪ್ರಾಣ ರಕ್ಷಣೆ ಮಾಡಬೇಕು.

ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರು ಸಚಿವರನ್ನು ಭೇಟಿ ಮಾಡುವುದರಿಂದ ಎನಾದರೂ ಪ್ರಯೋಜನವಿದೆಯೆ ಎಂದು ಅವರನ್ನೇ ಕೇಳಬೇಕು ಎಂದು ತಿಳಿಸಿದ ಬಿ.ಜೆ.ಪಿ. ತಾಲೂಕಾ ಮಂಡಳದ ಅಧ್ಯಕ್ಷ ಮಾರುತಿ ನಾಯ್ಕ ಪ್ರಮುಖ ಇಲಾಖೆಗಳ ಅನುದಾನ ಕಡಿಮೆ ಮಾಡಿ ಹೇಗೆ ಜನಸಾಮಾನ್ಯರಿಗೆ ನೆರವಾಗುತ್ತಾರೆ ಎಂದು ಪ್ರಶ್ನಿಸಿದರು.
